Breaking News

800 ಅಡಿ ಪ್ರಪಾತಕ್ಕೆ ಬಿದ್ದು ದುರಂತ ಅಂತ್ಯ ಕಂಡ ದಂಪತಿ ..!

ಕ್ಯಾಲಿಫೋರ್ನಿಯಾ ರಾಷ್ಟ್ರೀಯ ಉದ್ಯಾನದಲ್ಲಿ ಘೋರ ಘಟನೆ..

SHARE......LIKE......COMMENT......

ಕ್ಯಾಲಿಫೋರ್ನಿಯಾ:

ಕ್ಯಾಲಿಫೋರ್ನಿಯಾದ ರಾಷ್ಟ್ರೀಯ ಉದ್ಯಾನದಲ್ಲಿ ಭಾರತೀಯ ಮೂಲದ ದಂಪತಿ 800 ಅಡಿ ಪ್ರಪಾತದಿಂದ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ.
ವಿಷ್ಣು ವಿಶ್ವನಾಥ್​ (29) ಮತ್ತು ಮೀನಾಕ್ಷಿ ಮೂರ್ತಿ (30) ಎಂಬ ಜೋಡಿ ಯೂಸೆಮಿಟಿ ನ್ಯಾಷನಲ್​ ಪಾರ್ಕ್​ನ ಬೆಟ್ಟದ ತುತ್ತತುದಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು, ಅವರನ್ನು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿ ಎಂದು ಗುರುತಿಸಲಾಗಿದೆ.

ಸಿಸ್ಕೊ ಸಂಸ್ಥೆಯಲ್ಲಿ ಸಿಸ್ಟಮ್​ ಇಂಜಿನಿಯರ್​ ಆಗಿ ಕೆಲಸ ಸಿಕ್ಕಮೇಲೆ ಮೃತ ದಂಪತಿ ನ್ಯೂಯಾರ್ಕ್​ನಿಂದ ಅಮೆರಿಕಕ್ಕೆ ತೆರಳಿದ್ದರು ಎನ್ನಲಾಗಿದ್ದು, ಈ ದಂಪತಿಗೆ ವಿಶ್ವ ಸುತ್ತುವ ಕನಸಿತ್ತು ಎಂಬುದನ್ನು ಅವರೇ ‘Holidays and HappilyEverAfters’ ಎಂಬ ಬ್ಲಾಗ್​ನಲ್ಲಿ ಬರೆದಿಕೊಂಡಿದ್ದಾರೆ.

ಬೆಟ್ಟದ ತುದಿಯಿಂದ ಕೆಳಗೆ ಬಿದ್ದ ಪುರುಷ ಹಾಗೂ ಮಹಿಳೆಯ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅ.25ರಂದೇ ನ್ಯಾಷನಲ್​ ಪಾರ್ಕ್​ ಅಧಿಕೃತ ಹೇಳಿಕೆ ನೀಡಿತ್ತು. ಆದರೆ ಸೋಮವಾರ ಈ ಮೃತ ದಂಪತಿ ಭಾರತದ ಮೂಲದವರು ಎಂದು ತಿಳಿದು ಬಂದಿದೆ.

ದಂಪತಿ ಪ್ರಪಾತಕ್ಕೆ ಬಿದ್ದಿರುವುದರ ಕುರಿತು ನಮಗಿನ್ನೂ ಕಾರಣ ತಿಳಿದು ಬಂದಿಲ್ಲ. ಘಟನೆ ಹೇಗೆ ಸಂಭವಿಸಿತು ಎಂಬುದನ್ನು ಇನ್ನೂ ಅರ್ಥೈಸಿಕೊಳ್ಳುತ್ತಿದ್ದೇವೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ಕುರಿತು ಸ್ಪಷ್ಟ ಮಾಹಿತಿ ಸಿಗುವುದಿಲ್ಲ ಎಂದೆನಿಸುತ್ತದೆ. ಆದರೆ ಇದೊಂದು ದುರಂತ ಅಂತ್ಯ ಎಂದು ನ್ಯಾಷನಲ್​ ಪಾರ್ಕ್​ನ ವಕ್ತಾರ ಜೇಮ್​ ರಿಚರ್ಡ್​ ತಿಳಿಸಿದ್ದಾರೆ.

ವೃತ್ತಿಯಲ್ಲಿ ಇಬ್ಬರೂ ಸಾಫ್ಟ್​ವೇರ್​ ಇಂಜಿನಿಯರ್​ಗಳಾಗಿದ್ದರು ಹಾಗೂ ನಮ್ಮ ಕಾಲೇಜಿನಲ್ಲಿ 2006ರಿಂದ 2010ರವರೆಗೆ ಕಂಪ್ಯೂಟರ್​ ಸೈನ್ಸ್​ ಮತ್ತು ಇಂಜಿನಿಯರಿಂಗ್​ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು ಎಂದು ಚೆಂಗನ್ನೂರ್​ ಎಂಜಿನಿಯರಿಂಗ್​ ಕಾಲೇಜಿನ ಹೆಸರಿನ ಫೇಸ್​ಬುಕ್ ​ ಪೋಸ್ಟ್​ನಲ್ಲಿ ಬರೆದುಕೊಳ್ಳಲಾಗಿದೆ…..