ಕ್ರೀಡೆ:
ಕ್ರಿಕೆಟಿಗ ಶ್ರೀಶಾಂತ್ಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ಶ್ರೀಶಾಂತ್ ಮೇಲಿನ ಅಜೀವ ತೆರವನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮ್ಯಾಚ್ ಫಿಕ್ಸಿಂಗ್ನಲ್ಲಿ ಶ್ರೀಶಾಂತ್ ಭಾಗಿಯಾಗಿದ್ದನೆಂಬ ಆರೋಪದ ಮೇಲೆ ಬಿಸಿಸಿಐ ಅಜೀವ ತೆರವು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ರು. ಇಂದು ವಿಚಾರಣೆ ನಡೆಸಿದ ಸುಪ್ರೀಂ, ಅಜೀವ ತೆರವನ್ನ ವಜಾಗೊಳಿಸಿದ್ದು, ಮೂರು ತಿಂಗಳಲ್ಲಿ ಶ್ರೀಶಾಂತ್ಗೆ ಬೇರೆ ರೀತಿಯ ಶಿಕ್ಷೆ ನೀಡುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ಖುಷಿ ನೀಡಿದೆ ಅಂತಾ ಶ್ರೀಶಾಂತ್ ಹೇಳಿದ್ದಾರೆ. ಇನ್ನು, ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆ, ಶ್ರೀಶಾಂತ್ ಸಲ್ಲಿಸಿದ್ದ ಅರ್ಜಿಯನ್ನು ಪುನರ್ ಪರಿಶೀಲಿಸುವಂತೆ ಬಿಸಿಸಿಐ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ……