ಗುಜರಾತ್:
ಗುಜರಾತ್‌ನಲ್ಲಿ ಇಂದು ಅಂತಿಮ ಹಂತದ ವೋಟಿಂಗ್ ನಡೆಯುತ್ತಿದೆ. 14 ಜಿಲ್ಲೆಗಳ 93 ಸೀಟ್ಗಳಿಗೆ ವೋಟಿಂಗ್ ನಡೆಯುತ್ತಿದ್ದು, ಹೀಗಾಗಿ ಗುಜರಾತ್ ಫಲಿತಾಂಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿರುವ ಕ್ಷೇತ್ರಗಳೇ ನಿರ್ಣಾಯಕ ಎನಿಸಿಕೊಳ್ಳಲಿವೆ. ಮೊದಲ ಹಂತದಲ್ಲಿ 89 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. 2017ಕ್ಕೆ ಹೋಲಿಸಿದರೆ ಮೊದಲ ಹಂತದಲ್ಲಿ ಶೇಕಡಾ 5ರಷ್ಟು ವೋಟಿಂಗ್ ಕಡಿಮೆಯಾಗಿತ್ತು. ಹೀಗಾಗಿ ಇಂದು ಹೆಚ್ಚು ಮತದಾನ ಮಾಡಿಸಲು ಮೂರೂ ಪಕ್ಷಗಳೂ ಪ್ರಯತ್ನ ಮಾಡ್ತಿವೆ. 2.5 ಕೋಟಿ ಮತದಾರರು 833 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದ್ದಾರೆ.