ಲೈಫ್ ಸ್ಟೈಲ್:
ಗೂಗಲ್ನ ಪಿಕ್ಸೆಲ್ ಫೋನ್ ಶುದ್ಧ ಆಂಡ್ರಾಯ್ಡ್ ಸಾಫ್ಟ್ವೇರ್ ಮತ್ತು ಫೋಟೋಗ್ರಫಿ ಪ್ರಿಯರ ಅಚ್ಚುಮೆಚ್ಚು. ಗೂಗಲ್ ಪಿಕ್ಸೆಲ್ ಫೋನ್ ಸರಣಿಯಲ್ಲಿ ಪಿಕ್ಸೆಲ್ 3a ಮತ್ತು 3a XL ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತ್ತು. ಅದಾದ ಬಳಿಕ ನೂತನ, ಪಿಕ್ಸೆಲ್ 4 ಫೋನ್ ಬಿಡುಗಡೆಗೆ ಸಜ್ಜಾಗಿದೆ. ಗೂಗಲ್ ಕಂಪನಿಯ 5ಜಿ ಸ್ಮಾರ್ಟ್ಫೋನ್ ಸಿದ್ಧತೆಯಲ್ಲಿ ತೊಡಗಿದ್ದು, ಅಕ್ಟೋಬರ್ 15ರಂದು ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಗೂಗಲ್ನ ಮುಂಬರುವ ಪಿಕ್ಸೆಲ್4 ಸ್ಮಾರ್ಟ್ಫೋನ್ 5ಜಿ ತಂತ್ರಜ್ಞಾನ ಆಧರಿತವಾಗಿರುತ್ತದೆ.ವಿಶೇಷ ಏನೆಂದರೆ, ಪಿಕ್ಸೆಲ್ 4 ಮತ್ತು 4 ಎಕ್ಸ್ಎಲ್ ಸ್ಮಾರ್ಟ್ಫೋನ್ ಲೈವ್ ಕ್ಯಾಪ್ಷನ್ ಎಂಬ ವಿಶೇಷ ಫೀಚರ್ ಹೊಂದರಲಿವೆ. ಇದರಡಿ ಆಡಿಯೊ ಸ್ವಯಂ ಆಗಿ ಸಬ್ಟೈಟಲ್ಗೆ ಪರಿವರ್ತನೆಗೊಂಡು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದೆ. ಹಾಗೆಯೇ, ಹೊಸದಾದ ಮೋಷನ್ ಸೆನ್ಸ್ ಮೋಡ್ ಕೂಡ ಇರಲಿದ್ದು, ಒಂಬತ್ತು ಅಪ್ಲಿಕೇಷನ್ಗಳಿಗೆ ಇದು ಸಪೋರ್ಟ್ ಮಾಡಲಿದೆ. 5ಜಿ ಮಾತ್ರವಲ್ಲದೇ ವಿಶೇಷ ಫೀಚರ್ಗಳೊಂದಿಗೆ ಪಿಕ್ಸೆಲ್ನ ಹೊಸ ಫೋನ್ಗಳು ಗ್ರಾಹಕರನ್ನು ಹೇಗೆ ಸೆಳೆಯಲಿವೆ ಎಂಬುದನ್ನು ಕಾದು ನೋಡಬೇಕು…..