Breaking News

ಕೋರ್ಟ್ ನೋಟೀಸ್ ಗೆ ಹೆದರಿ ನೇಣಿಗೆ ಶರಣು..!

ಆಟೋ ಚಾಲಕ ಹೀನಾಯ ಕೃತ್ಯ....

SHARE......LIKE......COMMENT......

ಚಾಮರಾಜನಗರ:

ನ್ಯಾಯಾಲಯದಿಂದ ನೋಟೀಸ್ ಬಂದದ್ದು ಕಂಡು ಗಾಬರಿಗೊಂಡ ಆಟೋ ಚಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಗೂಳಿಪುರದದಲ್ಲಿ ನಡೆದಿದೆ.

ಗೂಳಿಪುರ ನಿವಾಸಿ ಆಟೋ ಚಾಲಕ ಮಹೇಶ್ ಅಲಿಯಾಸ್ ಬೆಳ್ಳಪ್ಪ (26) ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ಎರಡು ವರ್ಷದ ಹಿಂದೆ ನಡೆದ ಅಪಘಾತವೊಂದರ ಸಂಬಂಧ ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಾಲಯದಿಂದ ನೋಟೀಸ್ ಬಂದಿತ್ತು ಎನ್ನಲಾಗಿದ್ದು ನೋಟೀಸ್ ನೋಡಿ ಗಾಬರಿಯಾಗಿದ್ದ ಮಹೇಶ್ “ತಾನು ಜೈಲಿಗೆ ಹೋದರೇನು ಗತಿ!” ಎಂದು ಭಯದಿಂದ ನೇಣಿಗೆ ಶರಣಾಗಿದ್ದಾನೆ.

ಭಾನುವಾರ ಮನೆಯಲ್ಲಿ ಊಟ ಮಾಡಿ ಹೊರ ಹೋಗಿದ್ದ ಮಹೇಶ್ ಗ್ರಾಮದ ಹೊರಗಿದ್ದ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸೋಮವಾರ ಬೆಳಿಗ್ಗೆ ವರೆಗೆ ಮಹೇಶ್ ಮನೆಗೆ ವಾಪಾಸಾಗದ್ದನ್ನು ಕಂಡ ಕುಟುಂಬದವರು ಅವನ ಹುಡುಕಾಟದಲ್ಲಿದ್ದಾಗ ಮರಕ್ಕೆ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.ಘಟನೆ ಸಂಬಂಧ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ…..