Breaking News

ಚಿನ್ನದ ಬೆಲೆ ಗಗನಕ್ಕೆ..!

ಚಿನ್ನದ ದರವು ಶೇ.25ರಷ್ಟು ಏರಿಕೆ....

SHARE......LIKE......COMMENT......

ಬೆಂಗಳೂರು:

ಅಮೆರಿಕ ಮತ್ತು ಇರಾನ್​​ ನಡುವಿನ ಯುದ್ಧ ಭೀತಿ ಹೆಚ್ಚುತ್ತಿದ್ದಂತೆ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಕಳೆದ ಎರಡು ದಿನಗಳಲ್ಲಿ ಬರೋಬ್ಬರಿ 800 ರೂಪಾಯಿಗಳಷ್ಟು ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನದ ಮೇಲಿನ ದರವು 260 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರವು 42 ಸಾವಿರ 460 ರೂಪಾಯಿಗೆ ತಲುಪಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದೇ ದಿನದಲ್ಲಿ ಚಿನ್ನದ ದರವು ಶೇಕಡಾ 2.6ರಷ್ಟು ಏರಿಕೆ ಕಂಡಿದೆ. ನಿನ್ನೆಯೇ 42 ಸಾವಿರ ರೂಗೆ ತಲುಪಿದ್ದ 10 ಗ್ರಾಂ ಚಿನ್ನವು ಇಂದು 42 ಸಾವಿರದ 278 ರೂಗೆ ಏರಿಕೆಯಾಗಿದೆ. ಇದೇ ರೀತಿ ಯುದ್ಧಬೀತಿ ಮುಂದುವರೆದರೆ ಚಿನ್ನ ಮತ್ತಷ್ಟು ದುಬಾರಿಯಾಗಲಿದೆ. 4 ದಿನಗಳಲ್ಲಿ ಚಿನ್ನವು 2 ಸಾವಿರದ 300 ರೂಗಳಷ್ಟು ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ  ಚಿನ್ನದ ದರವು ಶೇ.25ರಷ್ಟು ಏರಿಕೆಯಾಗಿದೆ……