ಬಿಹಾರ:
ಬಿಹಾರದ ನಿತೀಶ್ ಕುಮಾರ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇವತ್ತು 31 ಮಂದಿ ನೂತನ ಸಂಪುಟ ಸೇರಿಕೊಂಡಿದ್ದಾರೆ. ಆರ್ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚನೆ ಮಾಡಿವೆ. ಡಿಸಿಎಂ ತೇಜಸ್ವಿಯಾದವ್ ಸೋದರ ತೇಜ್ ಪ್ರತಾಪ್ ಯಾದವ್ ಕೂಡಾ ಸಂಪುಟ ಸೇರಿಕೊಂಡಿದ್ದಾರೆ. ಆರ್ಜೆಡಿಯ 16 ಮಂದಿಗೆ ನಿತೀಶ್ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಬಿಜೆಪಿ ಜತೆ ಮೈತ್ರಿ ಮುರಿದುಕೊಂಡ ನಂತರ ನಿತೀಶ್ ಆರ್ಜೆಡಿ ಸಖ್ಯ ಬೆಳೆಸಿದ್ದರು.