Breaking News

ರೈಲು ಹೊರ​ಡುವ 5 ನಿಮಿಷ ಮುನ್ನವೂ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆ ಜಾರಿ..!

ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್....

SHARE......LIKE......COMMENT......

ನವ​ದೆ​ಹ​ಲಿ:

ರೈಲು ಹೊರ​ಡುವ ಕೇವಲ 5 ನಿಮಿಷ ಮುನ್ನವೂ ಟಿಕೆಟ್‌ ಬುಕ್‌ ಮಾಡುವ ಹೊಸ ವ್ಯವಸ್ಥೆ ಜಾರಿಗೆ ಬರ​ಲಿದೆ. ಇದು ಪ್ರಯಾ​ಣಿ​ಕ​ರಿಗೆ ಭಾರೀ ಅನು​ಕೂಲ ಕಲ್ಪಿ​ಸ​ಲಿ​ದೆ. ಕೊರೋನಾ ಕಾಟ ಆರಂಭ​ವಾಗಿ ರೈಲು ಸಂಚಾರ ಸ್ಥಗಿತ ಆಗುವ ಮುಂಚೆ ರೈಲು ಹೊರ​ಡುವ 30 ನಿಮಿಷ ಮೊದಲು ಬುಕ್‌ ಮಾಡುವ ವ್ಯವಸ್ಥೆ ಇತ್ತು. ಆದರೆ ಕೊರೋನಾ ಲಾಕ್‌​ಡೌನ್‌ ಸಡಿ​ಲ​ಗೊ​ಳ್ಳು​ತ್ತಿ​ದ್ದಂತೆಯೇ ಆರಂಭ​ವಾ​ಗಿದ್ದ ವಿಶೇಷ ರೈಲು​ಗಳ ಮೊದಲ ಚಾರ್ಟನ್ನು ರೈಲು ಹೊರ​ಡುವ 4 ತಾಸು ಮುನ್ನ ಹಾಗೂ ಎರ​ಡನೇ ಚಾರ್ಟನ್ನು 2 ತಾಸು ಮುನ್ನ ಸಿದ್ಧ​ಪ​ಡಿ​ಸ​ಲಾ​ಗು​ತ್ತಿ​ತ್ತು. ಇನ್ನು ಮುಂದೆ ಮೊದ​ಲಿ​ನ ವ್ಯವ​ಸ್ಥೆ​ಯನ್ನೇ ಪುನಾ​ರಂಭಿ​ಸಲು ರೈಲ್ವೆ ಇಲಾಖೆ ನಿರ್ಧ​ರಿ​ಸಿದೆ. ಮೊದಲ ಚಾರ್ಟನ್ನು ರೈಲು ಹೊರ​ಡು​ವ 4 ತಾಸು ಮೊದಲು ಸಿದ್ಧ​ಪ​ಡಿ​ಸ​ಲಾ​ಗು​ತ್ತದೆ. ಆಗ ಸೀಟು​ಗಳು ಉಳಿ​ದಿ​ದ್ದರೆ ಎರ​ಡನೇ ಚಾರ್ಟನ್ನು ರೈಲು ಹೊರ​ಡುವ 30 ನಿಮಿ​ಷ​ದಿಂದ 5 ನಿಮಿಷದ ನಡು​ವಿನ ಅವ​ಧಿ​ಯಲ್ಲಿ ಸಿದ್ಧ​ಪ​ಡಿ​ಸ​ಲಾ​ಗು​ತ್ತದೆ. ಇದ​ರರ್ಥ ರೈಲು ಹೊರ​ಡುವ 5 ನಿಮಿಷ ಮೊದಲೂ ಸೀಟು ಖಾಲಿ ಇದ್ದರೆ ಕೌಂಟ​ರ್‌​ನಲ್ಲಿ ಅಥವಾ ಆನ್‌​ಲೈನ್‌ ಮೂಲಕ ಟಿಕೆಟ್‌ ಬುಕ್‌ ಮಾಡ​ಬ​ಹು​ದಾ​ಗಿ​ದೆ. ಈ ಅವ​ಧಿ​ಯಲ್ಲಿ ಬುಕ್‌ ಆದ ಟಿಕೆಟ್‌ ರದ್ದು​ಗೊ​ಳಿ​ಸಲೂ ಅವ​ಕಾ​ಶ​ವಿ​ದೆ……