Breaking News

ಜನವರಿ 29ಕ್ಕೆ ರಾಮ ಮಂದಿರ ಭೂ ವಿಚಾರಣೆ..!

ಮುಂದೂಡಿದ ನ್ಯಾ.ರಂಜನ್​​​ ಗೊಗೋಯ್ ನೇತೃತ್ವದ ಪೀಠ....

SHARE......LIKE......COMMENT......

ನವದೆಹಲಿ:

ಆಯೋಧ್ಯೆ ರಾಮ ಮಂದಿರ ಭೂ ವಿವಾದ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಜನವರಿ 29ಕ್ಕೆ ಮುಂದೂಡಿದೆ. ನ್ಯಾ.ರಂಜನ್​​​ ಗೊಗೋಯ್ ನೇತೃತ್ವದ ಪೀಠದಿಂದ ವಿಚಾರಣೆಯನ್ನು ಮುಂದೂಡಿದೆ. ವಿಚಾರಣೆ ವೇಳೆ ಮುಸ್ಲಿಂ ಅರ್ಜಿದಾರರ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ವಿಚಾರಣೆ ಆರಂಭಕ್ಕೂ ಮುನ್ನವೇ ನ್ಯಾಯಮೂರ್ತಿ ಉಮೇಶ್​​ ಉದಯ್​​ ಲಲಿತ್ ಸಾಂವಿಧಾನಿಕ ಪೀಠದಿಂದ ಹಿಂದೆ ಸರಿದಿದ್ದಾರೆ. ಜನವರಿ 29ರಂದೇ ಹೊಸ ಸಾಂವಿಧಾನಿಕ ಪೀಠ ರಚಿಸಲಿದ್ದು ಅದೇ ದಿನ ವಿಚಾರಣೆ ಮಾಡಬೇಕೋ..ಬೇಡವೋ ಎಂಬ ಬಗ್ಗೆ ನಿರ್ಧರಿಸಲಿದ್ದಾರೆ…..