Breaking News

ಜಿಎಸ್‌ಟಿ ಸ್ಲ್ಯಾಬ್ 4ರಿಂದ 3ಕ್ಕೆ ಇಳಿಕೆ ಸಾಧ್ಯತೆ..!

ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್‌ ದೇಬ್‌ರಾಯ್‌ ಮಾಹಿತಿ.....

SHARE......LIKE......COMMENT......

ನವದೆಹಲಿ:

ಜಿಎಸ್‌ಟಿ ಅಡಿಯಲ್ಲಿರುವ ಈಗಿನ 4 ಶ್ರೇಣಿಗಳ ತೆರಿಗೆ ದರಗಳು 3ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಪ್ರಧಾನಿ ಅವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್‌ ದೇಬ್‌ರಾಯ್‌ ತಿಳಿಸಿದ್ದಾರೆ.

ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್‌ ಮಂಡಳಿಯ ಮಾಜಿ ಅಧ್ಯಕ್ಷ ಸುಮಿತ್‌ ದತ್‌ ಮಜುಂದಾರ್‌ ಅವರ ‘ಜಿಎಸ್‌ಟಿ: ಎಕ್ಸ್‌ಪ್ಲೈನ್ಡ್‌ ಫಾರ್‌ ಕಾಮನ್‌ ಮ್ಯಾನ್‌’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕ ತಜ್ಞರ ದೃಷ್ಟಿಕೋನ ಹಾಗೂ ರಾಷ್ಟ್ರದ ಹಿತ ದೃಷ್ಟಿಯಿಂದ ಜಿಎಸ್‌ಟಿಯಲ್ಲಿ ಒಂದೇ ತೆರಿಗೆ ಪದ್ಧತಿ ಇರಬೇಕು. ಕೆಲವೇ ರಾಷ್ಟ್ರಗಳಲ್ಲಿ ಮಾತ್ರ ಏಕ ತೆರಿಗೆ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಆದರೆ, ಭಾರತ, ಕೆನಡಾ, ಆಸ್ಪ್ರೇಲಿಯಾ ಸೇರಿದಂತೆ ಇತರೆ ರಾಷ್ಟ್ರಗಳು ಜಿಎಸ್‌ಟಿ ಶ್ರೇಣಿ ಅಳವಡಿಸಿಕೊಂಡಿವೆ ಎಂದರು.

ಬಹು ಶ್ರೇಣಿಗಳ ತೆರಿಗೆ ಪದ್ಧತಿಯು ಜಿಎಸ್‌ಟಿಯ ಸರಳೀಕರಣಕ್ಕೆ ಅಡ್ಡಿಯಾಗುತ್ತಿದೆ. ಹೀಗಾಗಿ, ಭಾರತದಲ್ಲಿ ಕೂಡ ಪರೋಕ್ಷ ತೆರಿಗೆ ಪದ್ಧತಿಯನ್ನು ಮತ್ತಷ್ಟು ಸರಳೀಕರಣಗೊಳಿಸುವ ಅವಶ್ಯಕತೆ ಇದೆ ಎಂದರು.

ಜಿಎಸ್​ಟಿ ಜಾರಿಗೊಳಿಸಿದ್ದ ರಾಷ್ಟ್ರಗಳು ತೆರಿಗೆಯ ವ್ಯವಸ್ಥೆಯಲ್ಲಿ ಸ್ಥಿರತೆ ಮತ್ತು ಬದ್ಧತೆ ಕಂಡುಕೊಳ್ಳಲು ಕನಿಷ್ಠವೆಂದರೂ ಹತ್ತು ವರ್ಷಗಳು ತೆಗೆದುಕೊಂಡಿವೆ. ಆದರೆ, ಭಾರತ ಇಷ್ಟೊಂದು ಕಾಲಾವಕಾಶ ತೆಗೆದುಕೊಳ್ಳುವುದಿಲ್ಲ. ಮುಂಬರುವ ದಿನಗಳಲ್ಲಿ ಈಗಿರುವ 4 ಶ್ರೇಣಿಯ ತೆರಿಗೆಯಲ್ಲಿ ಒಂದನ್ನು ಕೈಬಿಟ್ಟು 3ಕ್ಕೆ ಇಳಿಸುವ ಯೋಜನೆ ಇದೆ ಎಂದು ಅವರು ಹೇಳಿದ್ದಾರೆ.ಈಗ ಶೇ.5, ಶೇ.12, ಶೇ.18 ಮತ್ತು ಶೇ.28 ಎಂದು ನಾಲ್ಕು ಬಗೆಯ ಜಿಎಸ್‌ಟಿ ತೆರಿಗೆಯ ಶ್ರೇಣಿ ಜಾರಿಯಲ್ಲಿವೆ…….