ದೇಶ-ವಿದೇಶ:
ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೇ ಅಮೇರಿಕ ಅಧ್ಯಕ್ಷ ಟ್ರಂಪ್ಗೆ ಪ್ರಧಾನಿ ಮೋದಿ ಕರೆ ಮಾಡಿದ್ದಾರೆ. ಹೊಸವರ್ಷದ ನೆಪದಲ್ಲಿ ಫೋನ್ ಮೂಲಕ ಮಾತುಕತೆ ನಡೆಸಿದ ಮೋದಿ ಇರಾನ್ ಜತೆಗಿನ ಯುದ್ಧ ಸ್ಥಿತಿ ಕುರಿತಂತೆ ಚರ್ಚಿಸಿದ್ದಾರೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆ ಮೇಲೆ ಎಫೆಕ್ಟ್ ಆಗಿದೆ. ಕಳೆದ ಒಂದು ವಾರದಲ್ಲಿ ಭಾರತ 3 ಲಕ್ಷ ಕೋಟಿ ನಷ್ಟ ಅನುಭವಿಸಿದೆ. ಯುದ್ದ ಸ್ಥಿತಿ ಮುಂದುವರೆದರೆ ಭಾರತದ ಆರ್ಥಿಕತೆಗೆ ಮತ್ತಷ್ಟು ಪೆಟ್ಟಾಗುತ್ತೆ. ಮಧ್ಯಪ್ರಾಚ್ಯ ರಾಷ್ಟ್ರಗಳ ತೈಲ, ಚಿನ್ನದ ಮೇಲೆ ಭಾರತ ಅವಲಂಬಿತವಾಗಿದೆ. ಇರಾನ್, ಇರಾಕ್ ಸೇರಿ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಭಾರತೀಯರಿದ್ದಾರೆ. ಯುದ್ಧ ಸ್ಥಿತಿಯಿಂದ ಅನಿವಾಸಿ ಭಾರತೀಯರಿಗೆ ಸಂಕಷ್ಟ ಸಾಧ್ಯತೆ ಇದೆ ಅಂತಾ ಟ್ರಂಪ್ ಜತೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ. ಹೊಸವರ್ಷದ ಶುಭಕೋರುವ ನೆಪದಲ್ಲಿ ಫೋನ್ ಮೂಲಕ ಮಾತುಕತೆ…..