ತಮಿಳುನಾಡು:
ಪನಿ ಚಂಡ ಮಾರುತದ ಮುನ್ನೆಚ್ಚರಿಕೆ ಬೆನ್ನಲ್ಲೇ ತಮಿಳುನಾಡಿನ ಊಟಿ ಮತ್ತು ನೀಲಗಿರೀಸ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗ್ತಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪ್ರವಾಸಿ ತಾಣಗಳು ತತ್ತರಿಸಿ ಹೋಗಿವೆ. ಆಲಿಕಲ್ಲು ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಮರಗಳು ಧರೆಗುರುಳಿವೆ. ಭಾರೀ ಗುಡ್ಡಗಳು ರಸ್ತೆಗೇ ಕುಸಿದು ಬೀಳ್ತಿವೆ. ಹೀಗಾಗಿ ಹತ್ತಕ್ಕೂ ಹೆಚ್ಚು ಕಾರು, ಬಸ್ಗಳೂ ಜಖಂಗೊಂಡಿವೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ಅದ್ರಲ್ಲೂ ಮಾವಿನ ಫಸಲಿಗೆ ಭಾರೀ ಹೊಡೆತ ಬಿದ್ದಿದೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಸಹಸ್ರಾರು ಪ್ರವಾಸಿಗರು ಊಟಿ ಮತ್ತು ನೀಲಗಿರೀಸ್ ಪ್ರದೇಶಗಳಿಗೆ ಬಂದಿದ್ದು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ……