ತಾಂಡಾದಲ್ಲಿ ಒಟ್ಟು 68 ಕುಟುಂಬಗಳಿದ್ದು, ಸುಮಾರು 350 ಜನಸಂಖ್ಯೆ ವಾಸ ಮಾಡುತ್ತಿದ್ದಾರೆ. ತಾಂಡಾದಲ್ಲಿ 6 ವರ್ಷದೊಳಗಿನ ಸುಮಾರು 50ರಿಂದ 60 ಮಕ್ಕಳಿದ್ದು, ಇವರೆಲ್ಲರೂ ಅಂಗನವಾಡಿ ಶಿಕ್ಷಣದಿಂದ ವಂಚಿತರಾಗಿ ತಾಂಡಾದಲ್ಲಿಯೇ ಕುರಿ ಕಾಯುವ ಕಾಯಕದಲ್ಲಿ ತೋಡಗಿಸಿಕೊಂಡಿದ್ದು, ಅವರ ಭವಿಷ್ಯ ಶೋಚನೀಯವಾಗಿದೆ.
HKRDB ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಿಸಿದರೂ ಕಾರ್ಯಕರತರು ಮತ್ತು ಸಹಾಯಕಿಯ ನೇಮಕ ಮಾಡದ ಕಾರಣ ತಾಂಡಾದ ಮಕ್ಕಳು ಕೇಂದ್ರ ಮೂಲ ಸೌಕರ್ಯದಿಂದ ವಂಚಿತಗೊಂಡಿದ್ದಾರೆ.
ನೆರಳಗುಂಡ ತಾಂಡಾದಲ್ಲಿ ಗರ್ಭಿಣಿಯರು, ಬಾಣಂತಿಯರು ಪೌಷ್ಟಿಕ ಆಹಾರ ಪಡೆಯಲು, ಚಿಕ್ಕ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಲು ಚಳಿ, ಮಳೆ, ಬಿಸಿಲೆನ್ನದೇ 2ಕಿಮೀ ದೂರದ ಆರ್ಆರ್ ನಗರ ತಾಂಡಾಕ್ಕೆ ನಡೆದುಕೊಂಡು ಹೋಗಬೇಕಾಗಿದೆ.
ತಾಂಡಾದಲ್ಲಿ ನಿರ್ಮಾಗೊಂಡ ಅಂಗನವಾಡಿ ಕೇಂದ್ರಕ್ಕೆ ಕೂಡಲೇ ಸಹಾಯಕಿ ಮತ್ತು ಕಾರ್ಯಕರ್ತೆಯನ್ನು ನೇಮಕ ಮಾಡಿ ತಾಂಡಾದ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ತಾಂಡಾದ ಜನರು ಒತ್ತಾಯಿಸಿದ್ದಾರೆ……