Breaking News

ದುನಿಯಾ ವಿಜಯ್​​​ಗೆ ಸಂಕಷ್ಟ..!

ಬ್ಲ್ಯಾಕ್ ಕೋಬ್ರಾಗೆ 7 ವರ್ಷಗಳ ಜೈಲು ಶಿಕ್ಷೆ ಸಾಧ್ಯತೆ.....

SHARE......LIKE......COMMENT......

ಸಿನಿಮಾ:

ಕಳೆದ ವರ್ಷ ಸೆಪ್ಟೆಂಬರ್ 22 ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಜಿಮ್ ಟ್ರೈನರ್ ಮಾರುತಿಗೌಡ ಮೇಲೆ ದುನಿಯಾ ವಿಜಯ್ ಹಾಗೂ ಸಂಗಡಿಗರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರುತಿಗೌಡ ಮೇಲೆ ಹಲ್ಲೆ ನಡೆದಿರುವುದು ತನಿಖೆಯಲ್ಲಿ ಸಾಬೀತಾಗಿದ್ದು ಪೊಲೀಸರು ಸಾಕ್ಷ್ಯ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಹೈ ಗ್ರೌಂಡ್ ಪೊಲೀಸರಿಂದ ದೋಷಾರೋಪ ಪಟ್ಟಿ ಸಿದ್ಧವಾಗಿದೆ ಎನ್ನಲಾಗ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಭವನದಲ್ಲಿ ಹಲ್ಲೆ ನಡೆಸಿದ್ದ ವಿಡಿಯೋವನ್ನು ಪೊಲೀಸರು ಹೈ ವಿಟ್ನೆಸ್ ಆಗಿ ತೆಗೆದುಕೊಂಡಿದ್ದಾರೆ.

ದುನಿಯಾ ವಿಜಯ್​​​​​, ಬಾಡಿ ಬಿಲ್ಡರ್ ಪ್ರಸಾದ್ ಹಾಗೂ ಮಣಿಯ ಬ್ಲಡ್ ಸ್ಯಾಂಪಲನ್ನು ಎಫ್​​ಎಸ್​​​ಎಲ್​​​​​​​​ಗೆ ಕಳಿಸಿದ್ದು ವಿಜಯ್​​​​​​​​​​​​​​ ಹಾಗೂ ಸಂಗಡಿಗರು ಘಟನೆ ವೇಳೆ ಡ್ರಗ್ಸ್ ಹಾಗೂ ಡ್ರಿಂಕ್ಸ್ ಸೇವಿಸಿದ್ದು ದೃಢವಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಎಫ್​​ಎಸ್​​​ಎಲ್​​ನಿಂದ ಅಧಿಕೃತವಾಗಿ ಡ್ರಗ್ಸ್ ಸೇವನೆ ಸಾಬೀತಾದರೆ ಎನ್​​​​​​​​​​ಡಿಪಿಎಸ್ ಅಡಿ ಕೇಸ್ ದಾಖಲಾಗುತ್ತೆ. ಬ್ಲ್ಯಾಕ್ ಕೋಬ್ರಾಗೆ 7 ವರ್ಷಗಳ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ……