ಮಂಡ್ಯ:
ಹೆಜ್ಜೇನು ದಾಳಿಯಿಂದ ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಕಲ್ಲಾರಪುರ ಗ್ರಾಮದ ಬಳಿ ನಡೆದಿದೆಮಳವಳ್ಳಿಯ ಶರತ್, ಶಿವಶಂಕರ್, ನಟರಾಜು ಮೂರ್ತಿ, ಪರಶಿವಮೂರ್ತಿ, ಸುಬ್ರಹ್ಮಣ್ಯ ಸ್ವಾಮಿ, ನಾಗೇಂದ್ರ ಸ್ವಾಮಿ ಗಾಯಗೊಂಡಿದ್ದಾರೆ. ಗಾಯಾಳುಗಳೆಲ್ಲರೂ ಮಳವಳ್ಳಿ ತಾಲೂಕಿನ ಕಲ್ಲಾರೆಪುರ ಗ್ರಾಮದ ಬಳಿ ಇರುವ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹೋಗಿದ್ದರು. ದೇವಸ್ಥಾನದ ಮುಂದೆ ಧೂಪ ಹಾಕಿದ್ದರಿಂದ ಜೇನುಗಳು ಭಕ್ತರ ಮೇಲೆ ದಾಳಿ ನಡೆಸಿವೆ.ಗಾಯಾಳುಗಳು ಮಳವಳ್ಳಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ……