Breaking News

ದೋಸ್ತಿ ಸರಕಾರಕ್ಕೆ ಮೋದಿಜಿ ಪಂಚ್‌..!

ಸಮ್ಮಿಶ್ರ ಸರ್ಕಾರ ಯಾರ ಹಿಡಿತದಲ್ಲಿದೆ....

SHARE......LIKE......COMMENT......

ಹುಬ್ಬಳ್ಳಿ:

ಇಂದು ಹುಬ್ಬಳ್ಳಿಯ ಕೆಎಲ್ಇ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ,ಸಮ್ಮಿಶ್ರ ಸರ್ಕಾರ ಯಾರ ಹಿಡಿತದಲ್ಲಿದೆ? ಸರ್ಕಾರದ ಉಸ್ತುವಾರಿ ಯಾರು ಎಂಬುದು ಬ್ರಹ್ಮನಿಗೇ ಗೊತ್ತು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ದೇಶಕ್ಕೆ ಮಜಬೂತಾದ ಸರ್ಕಾರ ಬೇಕೋ ಅಥವಾ ಮಜಬೂರಿ ಸರ್ಕಾರ ಬೇಕೋ ಎಂಬುದು ನಿಮ್ಮ ಒಂದೊಂದು ಮತವೂ ನಿರ್ಧರಿಸಲಿದೆ ಎಂದು ಮೋದಿ ಹೇಳಿದ್ದಾರೆ.

ಮಹಾಘಟಬಂಧನದ ಬಗ್ಗೆಯೂ ಮಾತನಾಡಿರುವ ಪ್ರಧಾನಿ ಮೋದಿ, ಎಲ್ಲರೂ ತಮ್ಮ ಖುರ್ಚಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ದೇಶದಲ್ಲಿ ಕರ್ನಾಟಕದ ಮಾದರಿಯ ಮಜಬೂರಿ ಸರ್ಕಾರ ಬೇಕೋ ಮಜಬೂತಾದ ಸರ್ಕಾರ ಬೇಕೋ, ಕ್ಲಾರಿಟಿ ಬೇಕೋ ಕನ್ಫ್ಯೂಷನ್ ಬೇಕೋ, ವಿಕಾಸವಾದ ಬೇಕೋ ವಂಶವಾದಬೇಕೋ ಎಂಬುದನ್ನು ನಿಮ್ಮ ಒಂದೊಂದು ಮತವೂ ನಿರ್ಧರಿಸಲಿದೆ ಎಂದು ಮೋದಿ ಜನತೆಗೆ ಹೇಳಿದ್ದರು…

ಇದೇ ವೇಳೆ ತಮ್ಮ ಸರ್ಕಾರದ ಸಾಧನೆಗಳನ್ನೂ ಜನತೆಗೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟರಿಗೆ ಮೋದಿ ಅಂದರೆ ಕಷ್ಟವಾಗಿದೆ. 40 ವರ್ಷಗಳಲ್ಲಿ ಆಗದ ಕೆಲಸವನ್ನು 4.5 ವರ್ಷಗಳಲ್ಲಿ ಮಾಡಿದ್ದೇವೆ. ಕರ್ನಾಟಕದಲ್ಲಿ ಚುನಾವಣೆ ಎದುರಾದಾಗ ಬರೊಬ್ಬರಿ 43 ಲಕ್ಷ ರೈತರ ಸಾಲ ಮನ್ನಾ ಮಾಡುವುದಾಗಿ ವಿಪಕ್ಷಗಳು ಭರವಸೆ ನೀಡಿದ್ದವು. ಆದರೆ ಈ ವರೆಗೂ ಕೇವಲ 700 ಜನರ ಸಾಲ ಮನ್ನಾ ಆಗಿದೆಯಷ್ಟೇ ಎಂದು ದೋಸ್ತಿ ಸರಕಾರಕ್ಕೆ ಮೋದಿಜಿ ಪಂಚ್‌ ಕೊಟ್ಟರು……