ಬೆಂಗಳೂರು:
ದೋಸ್ತಿ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದ ಸಚಿವ ಸಂಪುಟ ಇಂದು ಕೊನೆಗೂ ವಿಸ್ತರಣೆಯಾಗಿದೆ. . ಕಾಂಗ್ರೆಸ್ನ 8 ಶಾಸಕರಿಗೆ ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ರು. ಸಂಜೆ 5.30ಕ್ಕೆ ದ ಗ್ಲಾಸ್ ಹೌಸ್ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ನೂತನ ಸಚಿವರಿಗೆ ಪ್ರತಿಜ್ಞಾವಿಧಿಯನ್ನ ಬೋಧಿಸಿದ್ರು.
ಬಬಲೇಶ್ವರ ಶಾಸಕ, ಮಾಜಿ ಸಚಿವ ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ, ಶಾಸಕ ಸತೀಶ್ ಜಾರಕಿಹೊಳಿ, ಸಿ.ಎಸ್. ಶಿವಳ್ಳಿ, ಪಿ.ಟಿ. ಪರಮೇಶ್ವರ್ನಾಯ್ಕ್, ಇ. ತುಕಾರಾಂ, ಎಂಟಿಬಿ ನಾಗರಾಜ್ ರಹೀಂ ಖಾನ್ ಸಚಿವರಾಗಿ ಪದಗ್ರಹಣ ಮಾಡಿದ್ರು.
ಇತ್ತ ನೂತನವಾಗಿ ಪ್ರಮಾಣವಚನ ಸ್ವೀಕರಿಸಿ ಸಂಭ್ರಮದಲ್ಲಿ ಮಂತ್ರಿಗಳಿದ್ರೆ ಅತ್ತ”>ಕಡೆ ಸಚಿವ ಸ್ಥಾನ ಕೈ ತಪ್ಪಿದ ಬಂಡಾಯದ ಶಾಸಕರು ಕೆಂಡಕಾರುತ್ತಿದ್ರು.ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್ಗೂ ಮಿನಿಸ್ಟರ್ ಸೀಟ್ ಮಿಸ್ ಆಗಿದೆ. ಮಂತ್ರಿಗಿರಿ ಸಿಗದಿರೋದಕ್ಕೆ ಬಿಸಿ ಪಾಟೀಲ್ ಸೇರಿದಂತೆ ಬೆಂಬಲಿಗರೂ ಕೂಡಾ ಸಿಡಿಮಿಡಿಗೊಂಡಿದ್ದಾರೆ. ಮಾಜಿ ಸಚಿವ ರಾಮಲಿಂಗಾರೆಡ್ಡಿಗೂ ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಕ್ಕಿಲ್ಲ..ಇದ್ರಿಂದ ರೆಡ್ಡಿ ಬೆಂಬಲಿಗರು ಬೆಂಗಳೂರಿನ ಕೆಪಿಸಿಸಿ ಎದುರು ಪ್ರತಿಭಟನೆ ನಡೆಸಿದ್ರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್, ಕಲಬುರ್ಗಿ ಜೇವರ್ಗಿ ಕ್ಷೇತ್ರದಲ್ಲಿ ಶಾಸಕ ಅಜಯ್ ಸಿಂಗ್, ಗೆ ಸಚಿವ ಸ್ಥಾನ ತಪ್ಪಿರೋದಕ್ಕೆ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ.ಕಲಬುರ್ಗಿ ಶಾಸಕ ಎಂ.ವೈ ಪಾಟೀಲ್ ಸಚಿವ ಸ್ಥಾನ ಕೈ ತಪ್ಪಿದೆ. ರಾಯಚೂರಿನ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಹಾಗೂ ಶಾಸಕ ಲಂಬಾಣಿ ಸಮುದಾಯದ ಉಮೇಶ್ ಜಾಧವ್ಗೂ ಕೂಡಾ ಗರಂ ಆಗಿದ್ದಾರೆ……