Breaking News

ನಟಿ ರಮ್ಯಾ ಜತೆಗೆ ಅಮಲಾ ಪೌಲ್ ಲಿಪ್‍ಲಾಕ್..!

ಲೇಟೆಸ್ಟ್ ಟೀಸರ್‌ನಲ್ಲಿ ಇನ್ನಷ್ಟು ಬೋಲ್ಡ್ ....

SHARE......LIKE......COMMENT......
ಸಿನಿಮಾ:
ಅಮಲಾ ಪೌಲ್ ನಟಿಸಿರುವ ತಮಿಳಿನ ‘ಆಡೈ’ ಸಿನಿಮಾ ನಾನಾ ಕಾರಣಗಳಿಂದಾಗಿ ಗಮನಸೆಳೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್‌ನಲ್ಲಿ ಸಂಪೂರ್ಣ ನಗ್ನವಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ಚಕಿತಗೊಳಿಸಿದ್ದರು ಅಮಲಾ. ಇದೀಗ ಬಿಡುಗಡೆಯಾಗಿರುವ ಲೇಟೆಸ್ಟ್ ಟೀಸರ್‌ನಲ್ಲಿ ಇನ್ನಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹೊಸ ಟೀಸರ್‌ನಲ್ಲಿ ನಗ್ನ ಸನ್ನಿವೇಶಗಳು ಇಲ್ಲದಿದ್ದರು, ಸಿಗರೇಟ್ ಸೇದುತ್ತಾ, ಲಿಪ್‍ಲಾಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಹನಟಿ, ವಿಜೆ ರಮ್ಯಾರನ್ನು ಗಾಢವಾಗಿ ಚುಂಬಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಲಿಪ್‌ಲಾಕ್ ಎಂಬುದು ಈಗ ಸಾಮಾನ್ಯ ಎಂಬಂತಾಗಿದ್ದರೂ ಹುಡುಗಿ ಹುಡುಗಿಯನ್ನು ಚುಂಬಿಸಿಕೊಳ್ಳುವುದು ಅಪರೂಪ. ಹಾಗಾಗಿ ಅಮಲಾ ಪೌಲ್ ಲಿಪ್‍ಲಾಕ್ ಸನ್ನಿವೇಶ ಚರ್ಚೆಗೆ ಆಸ್ಪದ ನೀಡಿದೆ. ಆಡೈ ಸಿನಿಮಾ ತಮಿಳು, ತೆಲುಗಿನಲ್ಲಿ ಜುಲೈ 19ರಂದು ರಿಲೀಸ್ ಆಗುತ್ತಿದೆ. ಎಂ ಆರ್ ರತ್ನ ಈ ಸಿನಿಮಾದ ನಿರ್ದೇಶಕರು……