Breaking News

ನಾನೇಕೆ ದೇವೇಗೌಡರ ಬಳಿ ಹೋಗಲಿ..!

ದಿನೇಶ್‌ ಗುಂಡೂರಾವ್‌ ಹೇಳಿಕೆಗೆ ತಿರುಗೇಟು ನೀಡಿದ ಬಿ ಎಸ್ ವೈ....

SHARE......LIKE......COMMENT......

ಬಾಗಲಕೋಟೆ:

ನಿಮ್ಮನ್ನು ಸಿಎಂ ಮಾಡುತ್ತೇನೆಂದು ದೇವೇಗೌಡರು ಯಡಿಯೂರಪ್ಪಗೆ ಫೋನ್‌ ಮಾಡಿದರೆ ಅವರ ಮನೆಗೆ ಹೋಗಿ ತೊಡೆ ಮೇಲೆ ಕುಳಿತುಕೊಳ್ಳುತ್ತಾರೆ ಎಂಬ ದಿನೇಶ್‌ ಗುಂಡೂರಾವ್‌ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ,

“ನಾನೇಕೆ ದೇವೇಗೌಡರ ಮನೆಗೆ ಹೋಗಲಿ. ನನಗೇನು ಸಂಬಂಧ? ನನಗೆ ಸಹಾಯ ಮಾಡುತ್ತೇನೆ ಎಂದು ಹೇಳಿ 20:20 ತಿಂಗಳ ಅಧಿಕಾರದಲ್ಲಿ ಟೋಪಿ ಹಾಕಿ ದ್ರೋಹ ಮಾಡಿದ್ದಾರೆ. ಅಪ್ಪ-ಮಕ್ಕಳ ಪಕ್ಷದ ಜತೆಗೆ ಈ ಜನ್ಮದಲ್ಲಿ ಸಂಬಂಧ ಸಾಧ್ಯವಿಲ್ಲ’ ಎಂದು ಹೇಳಿದರು.

ಜಮಖಂಡಿ ಉಪ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಅವರು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದಿನೇಶ್‌ ಗುಂಡೂರಾವ್‌ ತಲೆತಿರುಕ ಹೇಳಿಕೆ ನೀಡಿದ್ದಾರೆ. ಈಚೆಗೆ ಅವರು ಜವಾಬ್ದಾರಿಯುತವಾಗಿ ಮಾತನಾಡುವುದನ್ನೇ ಬಿಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕ ಅಭಿವೃದ್ಧಿ ವಿರೋಧಿ ಎಂದರು.

ಶ್ರೀರಾಮುಲು ಅವರನ್ನು 420 ಎಂದಿರುವುದು ವಾಲ್ಮೀಕಿ ಸಮಾಜಕ್ಕೆ ಮಾಡಿದ ಅವಮಾನ. ಬಳ್ಳಾರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಮಾಜದವರು ಒಂದೇ ಒಂದು ಓಟು ಹಾಕಿದ್ರೂ ಶ್ರೀರಾಮುಲು ಮತ್ತು ವಾಲ್ಮೀಕಿ ಸಮಾಜಕ್ಕೆ ಜನರು ಮಾಡುವ ಅಪಮಾನ. ಕುಮಾರಸ್ವಾಮಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಹೋಗಲಿಲ್ಲ. ದೇವೇಗೌಡರು ಪ್ರಶಸ್ತಿ ಪಡೆಯಲು ಹೋಗಲಿಲ್ಲ. ಆ ಇಡೀ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದರು…….