ಬೆಂಗಳೂರು:
ಬಿಜೆಪಿಯ ಆಪರೇಷನ್ ಕಮಲ ಆತಂಕದ ನಡುವ ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದೆ.ರಾಜ್ಯದ ಎಲ್ಲಾ ಕಾಂಗ್ರೆಸ್ಗೆ ಶಾಸಕರಿಗೆ ಕಡ್ಡಾಯವಾಗಿ ಹಾಜರಾತಿಗೆ ಸೂಚನೆ ನೀಡಿ ಸಿದ್ದರಾಮಯ್ಯ ಪತ್ರ ಬರೆದಿದ್ದರೆ , ಶಾಸಕಾಂಗ ಸಭೆಗೆ ಗೈರಾದ್ರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮದ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ
ನಾಳೆ ಮಧ್ಯಾಹ್ನ 3.30ಕ್ಕೆ ವಿಧಾನಸೌಧದಲ್ಲಿ ನಡೆಯುವ ಶಾಸಕಾಂಗ ಸಭೆ ತೀವ್ರ ಕುತೂಹಲ ಮೂಡಿಸಿದೆ ಈ ಕುರಿತು ಎಲ್ಲ ಶಾಸಕರ ಕಡ್ಡಾಯ ಹಾಜರಾತಿದೆ ವಿಪ್ ಕೂಡ ಜಾರಿ ಮಾಡಲಾಗಿದೆ……