Breaking News

ತಾಜ್‌ಮಹಲ್‌ ಪ್ರವೇಶ ಶುಲ್ಕ ದುಬಾರಿ..!

ಎಂಟ್ರಿ ಫೀಸ್‌ 5 ಪಟ್ಟು ಹೆಚ್ಚು....

SHARE......LIKE......COMMENT......
ಆಗ್ರ :
ತಾಜ್‌ಮಹಲ್‌ ನೋಡಲು ಇದೀಗ ಭಾರಿ ಬೆಲೆ ತೆರಬೇಕಾಗಿ ಬಂದಿದೆ. ಈ ವರೆಗೆ 50 ರೂ.ನಲ್ಲಿ ಮುಖ್ಯ ವಸ್ತು ಪ್ರದರ್ಶನದ ಭಾಗಕ್ಕೆ ತೆರಳಲು ಅವಕಾಶ ನೀಡಿದ್ದ ಭಾರತೀಯ ಪುರಾತತ್ವ ಇಲಾಖೆ, ಈ ಎಂಟ್ರಿ ಫೀಸ್‌ ಅನ್ನು ಒಮ್ಮಿಂದೊಮ್ಮೆಲೇ 5 ಪಟ್ಟು ಹೆಚ್ಚಿಸಿದೆ. ಪ್ರಸ್ತುತ ತಾಜ್‌ಮಹಲ್‌ ಒಳ ಪ್ರವೇಶಕ್ಕೆ ಭಾರತೀಯರು ಬರೋಬ್ಬರಿ 250 ರೂ. ಪಾವತಿಸಬೇಕಾಗಿದ್ದು, ಅದೇ ವಿದೇಶಿಗರು 1300 ರೂ.ಗಳನ್ನು ನೀಡಬೇಕಾಗಿದೆ. ಅಲ್ಲದೆ ಸಾರ್ಕ್‌ ರಾಷ್ಟ್ರದ ಪ್ರಜೆಗಳು 540 ರೂ. ಬದಲಾಗಿ 740 ರೂ. ನೀಡಿ ತಾಜ್‌ಮಹಲ್‌ ಮುಖ್ಯ ಮ್ಯೂಸಿಯಂ ಪ್ರವೇಶಿಸಬೇಕಿದೆ.
ದಿಲ್ಲಿ ಹಾಗೂ ಸುತ್ತಮುತ್ತಲ ನಗರಗಳಿಂದ ವೀಕೆಂಡ್‌ ಡೆಸ್ಟಿನೇಷನ್‌ ಆಗಿರುವ ತಾಜ್‌ಮಹಲ್‌ಗೆ ರಜಾದಿನಗಳು ಹಾಗೂ ವಾರಾಂತ್ಯದಲ್ಲಿ ಸರಾಸರಿ 70 ಸಾವಿರ ಪ್ರವಾಸಿಗರು ಬರುತ್ತಿದ್ದಾರೆ. ಈ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ……