ಬ್ಯೂಟಿ ಟಿಪ್ಸ್:
ಮುಖದ ಸೌಂದರ್ಯದಲ್ಲಿ ಎದ್ದು ಕಾಣುವಂತಹದ್ದು ಒಂದು ಕಣ್ಣುಗಳು, ಮತ್ತೊಂದು ತುಟಿಗಳು. ತುಟಿಗಳು ಸುಂದರವಾಗಿದ್ದರೆ ಆಗ ಬೇರೆ ಏನೂ ಬೇಕಾಗಿಲ್ಲ. ಆದರೆ ಕೆಲವು ಮಹಿಳೆಯರ ತುಟಿಗಳು ತುಂಬಾ ಕಪ್ಪಾಗಿರುವುದು. ಇದಕ್ಕಾಗಿ ಲಿಪ್ ಸ್ಟಿಕ್ ಬಳಸಿಕೊಳ್ಳಬಹುದು.
ತುಟಿಗಳು ಕಪ್ಪಾಗಿರುವುದನ್ನು ಮರೆಮಾಚಲು ಲಿಪ್ ಸ್ಟಿಕ್ ನೆರವಾಗುವುದು. ಆದರೆ ಇದು ತಾತ್ಕಾಲಿಕ. ಮತ್ತೆ ನಿಮ್ಮ ತುಟಿಗಳು ಕಪ್ಪಾದಂತೆ ಕಂಡುಬರುವುದು. ಅತಿಯಾದ ಧೂಮಪಾನ, ಬಿಸಿಲಿಗೆ ಅತಿಯಾಗಿ ಮೈಯೊಡ್ಡುವುದು, ಕೆಟ್ಟ ರಾಸಾಯನಿಕ, ಕೆಫಿನ್ ಇತ್ಯಾದಿಗಳು ತುಟಿ ಕಪ್ಪಾಗಲು ಕಾರಣವಾಗಿದೆ.
ತುಟಿಗಳು ತುಂಬಾ ಸೂಕ್ಷ್ಮವಾಗಿರುವುದು ಮತ್ತು ನೇರವಾಗಿ ರಾಸಾಯನಿಕ ಬಳಕೆ ಮಾಡಿದಾಗ, ಅದರಿಂದ ಹಾನಿಯಾಗುವುದು. ತುಟಿಗಳಿಗೆ ಕೆಲವು ನೈಸರ್ಗಿಕ ಮನೆಮದ್ದು ಬಳಸಿದರೆ ಒಳ್ಳೆಯದು. ಲಿಂಬೆ ಬಳಸಿಕೊಂಡು ತುಟಿಗಳನ್ನು ಹೇಗೆ ಕಾಂತಿಯುತವಾಗಿಸುವುದು ಎಂದು ತಿಳಿಯೋಣ…
ಲಿಂಬೆಯು ನೈಸರ್ಗಿಕ ಬ್ಲೀಚಿಂಗ್ ಗುಣಗಳನ್ನು ಹೊಂದಿದೆ ಮತ್ತು ಇದು ಚರ್ಮದ ಬಣ್ಣ ಸುಧಾರಿಸುವುದು. ನೈಸರ್ಗಿಕ ಕ್ಲೆನ್ಸರ್ ಆಗಿರುವ ಇದು ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮದ ರಂಧ್ರಗಳನ್ನು ಶುದ್ಧೀಕರಿಸುವುದು. ಈಗ ನೀವು ಲಿಂಬೆಯಿಂದ ತಯಾರಿಸಬಹುದಾದ ಮನೆಮದ್ದುಗಳ ಬಗ್ಗೆ ತಿಳಿಯಿರಿ.
ಇದು ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಹೊಸ ಚರ್ಮದ ಕೋಶಗಳು ಬೆಳೆಯಲು ನೆರವಾಗುವುದು. ಮೊದಲು ನೀವು ಲಿಂಬೆ ತೆಗೆದುಕೊಂಡು ಎರಡು ತುಂಡುಗಳನ್ನಾಗಿ ಮಾಡಿ. ಇದರ ಮೇಲಿನ ಭಾಗಕ್ಕೆ ಸ್ವಲ್ಪ ಸಕ್ಕರೆ ಸಿಂಪಡಿಸಿ. ಇದನ್ನು ಮೇಲಿನ ಹಾಗೂ ಕೆಳಗಿನ ತುಟಿಗಳಿಗೆ ವೃತ್ತಾಕಾರದಲ್ಲಿ ಉಜ್ಜಿಕೊಳ್ಳಿ.15 ನಿಮಿಷ ಕಾಲ ಹಾಗೆ ಇರಲಿ ಮತ್ತು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಸಲ ಇದನ್ನು ಮಾಡಿ….