ಬೆಂಗಳೂರು:
ಸಚಿವ ಸಂಪುಟ ವಿಸ್ತರಣೆ ,ಖಾತೆ ಕ್ಯಾತೆ ನಂತರ ಶುರುವಾಗಿದ್ದೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಪೈಪೋಟಿ..ಯೆಸ್ ಒಟ್ಟು 19 ಸ್ಥಾನಗಳ ಅಧ್ಯಕ್ಷಗಿರಿಗೆ ಪಟ್ಟು ಹಿಡಿದಿದ್ದ ಕಾಂಗ್ರೆಸ್ ಗೆ ಸಿಎಂ ಮೊದಲ ಹಂತದಲ್ಲಿ 14 ಸ್ಥಾನಕ್ಕೆ ಮಾತ್ರ ಸಹಿ ಹಾಕಿದ್ದರು ಇದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಪಾಳೆಯ ಸಿಎಂ ವಿರುದ್ಧ ಕಿಡಿಕಾರಿದ್ದರು ,ಇದಾದ ಬಳಿಕ ಸಿಎಂ ಕುಮಾರಸ್ವಾಮಿ ಮತ್ತೆ ಉಳಿದಿದ್ದ 5ರಲ್ಲಿ ಕೇವಲ ಮೂರು ಸ್ಥಾನಕ್ಕೆ ಸಹಿ ಹಾಕಿ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹಾಗೂ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯಗೆ ಮತ್ತೆ 2ನೇ ಬಾರಿ ಕೂಡ ಭಾರಿ ಮುಖಭಂಗ ಮಾಡಿದ್ದಾರೆ…..