Breaking News

ಪರಮ ಪೂಜ್ಯರ ಹೆಜ್ಜೆಯ ಗುರುತುಗಳು….

ದೇವರು ನಡೆದು ಬಂದ ದಾರಿ....

SHARE......LIKE......COMMENT......

ತುಮಕೂರು:

ಶ್ರೀ ಶ್ರೀ ಪರಮಪೂಜ್ಯ ಶಿವಕುಮಾರ ಸ್ವಾಮಿಗಳ ದಿಟ್ಟ ಹೆಜ್ಜೆಯ ಗುರುತುಗಳು

*1907- ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರದ ಗ್ರಾಮದಲ್ಲಿ ಗಂಗಮ್ಮ ಹೊನ್ನಪ್ಪ ದಂಪತಿಗಳ 13ನೇ ಮಗನಾಗಿ ಶ್ರೀಗಳ ಜನನ
*1913- ವೀರಪುರ ಮತ್ತು ಪಾಲನಹಳ್ಳಿ ಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ
*1921- ತುಮಕೂರು ತಾಲೂಕಿನ ನಾಗವಲ್ಲಿ ಯಲ್ಲಿ ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ
*1922- ತುಮಕೂರಿನ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ
*1926- ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತಿರ್ಣ
*1927- ಶ್ರೀ ಉದ್ಧಾನ ಶಿವಯೋಗಿಗಳ ಆಶ್ರಯದಲ್ಲಿ ಸಿದ್ಧಗಂಗಾ ಮಠದಲ್ಲಿ ನಾಲ್ಕು ತಿಂಗಳ ವಾಸ್ತವ್ಯ.
*1927- ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆ.
*1927-30: ಬೆಂಗಳೂರಿನ ಶ್ರೀ ತೋಂಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ
*1930- ಮಾರ್ಚ್ 3ರಂದು ಶ್ರೀ ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ
*1937- ಶ್ರೀ ಸಿದ್ದಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಕಾಲೇಜ್ ಆಗಿ ಪರಿವರ್ತನೆ
*1941- ಜನವರಿ 11 ಶ್ರೀ ಉದ್ದಾನ ಶಿವಯೋಗಿಗಳು ಲಿಂಗೈಕ್ಯ ಸಿದ್ದಗಂಗಾ ಮಠದ ಪೂರ್ಣಾಧಿಕಾರಿಯಾಗಿ ಅಧಿಕಾರ ಸ್ವೀಕಾರ..
*1944- ಸೆಪ್ಟಂಬರ್ 1 ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಪ್ರೌಢ ಶಾಲೆ ಸ್ಥಾಪನೆ
*1949- ಜೂನ್ 18 ಶ್ರೀ ಸಿದ್ದಲಿಂಗೇಶ್ವರ ಸಂಸ್ಕೃತ ಮತ್ತು ವೇದ ಪಾಠಶಾಲೆಯ ರಜತೋತ್ಸವ
*1950- ಧರ್ಮಸ್ಥಳದ ಶ್ರೀ ಮಂಜುನಾಥ ಹೆಗಡೆ ಅವರಿಂದ ಮಹಾನಡಾವಳಿ ಉತ್ಸವದಲ್ಲಿ ಗೌರವ ಸ್ವೀಕಾರ
*1951- ಶ್ರೀಗಳವರಿಂದ ಪ್ರಭುಲಿಂಗಲೀಲೆಯ ಪ್ರವಚನ
*1956- ಶ್ರೀ ಕ್ಷೇತ್ರದಲ್ಲಿ ಸಂಸ್ಕೃತ ಕಾಲೇಜು ಕಟ್ಟಡ ನಿರ್ಮಾಣ ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಉಪಾಧ್ಯಯ ಶಿಕ್ಷಣ ತರಬೇತಿ ಸಂಸ್ಥೆ ಸ್ಥಾಪನೆ…..