ಕ್ರೀಡೆ:
ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ,ವ್ಯಾಪಕ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಆಟಗಾರರಾದ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಅವರ ತಾರಾ ಮೌಲ್ಯಕ್ಕೂ ಮತ್ತಷ್ಟು ಹೊಡೆತ ಬಿದಿದ್ದೆ.
ಬಿಸಿಸಿಐ ಅಮಾನತಿನ ನಂತರ ಹಾರ್ದಿಕ್ ಪಾಂಡ್ಯ ಅವರನ್ನು ಗಿಲೆಟ್ ಮ್ಯಾಕ್ 3 ಪುರುಷರ ಶೇವಿಂಗ್ ರೆಜರ್ ಜಾಹಿರಾತು ಒಪ್ಪಂದದಿಂದ ಕೈ ಬಿಡಲಾಗಿದೆ.ಹಾರ್ದಿಕ್ ಪಾಂಡ್ಯ ಅವರು ಇತ್ತೀಚಿಗೆ ನೀಡಿದ ಹೇಳಿಕೆ ಗಿಲೆಟ್ ಮೌಲ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಆದರೂ, ಹಾರ್ದಿಕ್ ಜೊತೆಗಿನ ಸಹಭಾಗಿತ್ವವನ್ನು ಅಮಾನತುಪಡಿಸಿದ್ದೇವೆ. ಮುಂದಿನ ಕ್ರಮ ಕುರಿತು ಚರ್ಚಿಸಲಾಗುವುದು ಎಂದು ಕಂಪನಿಯ ವಕ್ತಾರರರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಜೋಹರ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿದ್ದರು. ಹಲವು ಹೆಂಗಸರೊಂದಿಗೆ ಸಂಬಂಧ ಹೊಂದಿರುವುದಾಗಿ ಪಾಂಡ್ಯ ಮುಕ್ತವಾಗಿ ಹೇಳಿಕೆ ನೀಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ,ವ್ಯಾಪಕ ಟೀಕೆಗೆ ಗುರಿಯಾಗಿತ್ತು….