ಸಿನಿಮಾ:
ಪೆಟ್ಟಾ ಚಿತ್ರವನ್ನು ರಜನಿ ಅವರೇ ಕನ್ನಡದಲ್ಲಿ ಡಬ್ ಮಾಡಿದರೆ ನಾನು ಬಿಡುಗಡೆ ಮಾಡುತ್ತೇನೆ’ ಎಂದು ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು ತಿಳಿಸಿದ್ದಾರೆ…..ರಜನಿ ಅವರಿಗೆ ಕನ್ನಡ ಚೆನ್ನಾಗಿ ಗೊತ್ತು. ಅವರ ಮಾತಿನ ಶೈಲಿ ಹಲವರಿಗೆ ಇಷ್ಟವಾಗುತ್ತದೆ. ಹಾಗಾಗಿ ಅವರೇ ಡಬ್ ಮಾಡಬೇಕು ಎಂಬುದು ನನ್ನ ಆಸೆ. ಈ ವಿಚಾರದಲ್ಲಿ ನಾನು ಆಶಾವಾದಿ ಆಗಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಡಬ್ ಮಾಡಿರುವ ಸಿನಿಮಾಗಳನ್ನು ಕನ್ನಡದಲ್ಲಿ ಬಿಡುಗಡೆ ಮಾಡಲು ಈಗ ವಿರೋಧ ಇಲ್ಲ. ಡಬ್ ಸಿನಿಮಾಗಳನ್ನು ಬಿಡುಗಡೆ ಮಾಡಲು ನಾನು ಸಿದ್ಧನಿದ್ದೇನೆ. ನಾವಿಲ್ಲಿ ವಾಣಿಜ್ಯ ವಹಿವಾಟು ನಡೆಸುತ್ತಿದ್ದೇವೆ ಎಂದು ಉತ್ತರಿಸಿದರು.
ರಜನಿ ಅಭಿನಯದ ಪೆಟ್ಟಾ ಸಿನಿಮಾದ ತಮಿಳು, ಹಿಂದಿ ಮತ್ತು ತೆಲುಗು ಅವತರಣಿಕೆಗಳು ಗುರುವಾರ ಬಿಡುಗಡೆ ಆಗಲಿವೆ. ಕನ್ನಡದಲ್ಲಿ ಅದು ಡಬ್ ಆದರೆ, ಒಂದೆರಡು ವಾರಗಳ ನಂತರ ಬಿಡುಗಡೆ ಆಗಲಿದೆ ಎಂದರು….