ಚಿತ್ರದುರ್ಗ:
ನಗರದ ಜೆಸಿಆರ್ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಬಂಕ್ನಲ್ಲಿ ಬೆಂಕಿ ಅವಗಡ ನಡೆದಿದೆ. ಬಂಕ್ ನಲ್ಲಿ ಲಾರಿಯಿಂದ ಪೆಟ್ರೋಲ್ ಡಂಪ್ ಮಾಡುವಾಗ ವಿದ್ಯುತ್ ಅವಘಡ ಸಂಭವಿಸಿ, ಲಾರಿ ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದಾರೆ, ಇಬ್ಬರನ್ನೂ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೆಟ್ರೋಲ್ ಡಂಪ್ ಮಾಡುವ ವೇಳೆ ಮೊಬೈಲ್ ಬಳಸಿರೋದ್ರಿಂದ ಅನಾಹುತ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಕೆ.ಅರುಣ್, ಹಾಗೂ ತಹಶಿಲ್ದಾರ್ ಕಾಂತರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..