ಸಿನಿಮಾ:
ಕೆಜಿಎಫ್ ಚಾಪ್ಟರ್ 2 ನಂತ್ರ ರಾಕಿ ಭಾಯ್ ಯಾವ ಸಿನಿಮಾ ಮಾಡ್ತಾರೆ ಅನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ .ಯೆಸ್ ರಾಕಿಂಗ್ ಸ್ಟಾರ್ ಯಶ್ ನೆಕ್ಸ್ಟ್ ಯಾವ ಮೂವಿ ಮಾಡಿಲಿದ್ದಾರೆ ಅನ್ನೋದು ಅಭಿಮಾನಿಗಳಲ್ಲಿ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಆಗಿತ್ತು..ಇದೀಗ ರಾಕಿ ಭಾಯ್ ಸಾಲು ಸಾಲು ಸಿನಿಮಾಗಳಲ್ಲಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ ಅನ್ನೋ ಸುದ್ಧಿ ಎಲ್ಲಾ ಕಡೆ ಹರಿದಾಡುತ್ತಿದೆ… ಇದಲ್ಲದೇ ರಾಕಿಭಾಯ್ಗೆ ಪೂರಿ ಜಗನ್ನಾಥ್ ನಿರ್ದೇಶನ ಮಾಡಲಿದ್ದಾರೆ ಅನ್ನೋ ಮಾತುಗಳು ಈಗ ಕೇಳಿಬರ್ತಿದೆ. ಈಗಾಗಲೇ ಮಫ್ತಿ ಖ್ಯಾತಿಯ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಅನ್ನೋ ಸುದ್ದಿ ಸಹ ಸಖತ್ ಸೌಂಡ್ ಮಾಡಿತ್ತು. ಕೆಲ ಮೂಲಗಳ ಪ್ರಕಾರ ನರ್ತನ್ ಜೊತೆ ಯಶ್ ಸಿನಿಮಾ ಮಾಡುವುದು ಕನ್ಫರ್ಮ್ ಆಗಿದಿಯಂತೆ. ಇದೇ ನವೆಂಬರ್ 4ರಂದು ಯಶ್ ಹೊಸ ಸಿನಿಮಾ ಬಗ್ಗೆ ರಿವೀಲ್ ಮಾಡಲಿದ್ದು, ಹೊಂಬಾಳೆ ಫಿಲ್ಮ್ಸ್ ಇದಕ್ಕೆ ಬಂಡವಾಳ ಹೂಡುತ್ತಿದೆ ಅನ್ನೋ ಮಾತುಗಳು ಕೇಳಿಬರ್ತಿದೆ. ಇದೇನಾದ್ರೂ ನಿಜಾವಾದ್ರೆ ಭಾಯ್ ಫ್ಯಾನ್ಸ್ ಗೆ ಈ ದೀಪಾವಳಿ ಡಬಲ್ ಧಮಾಕಾ ಗ್ಯಾರೆಂಟಿ……