ಹೈದರಾಬಾದ್:
ಕಳೆ:ದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ತೆಲಂಗಾಣದ ಇತಿಹಾಸ ಪ್ರಸಿದ್ಧ ಚಾರ್ವಿುನಾರ್ಗೆ ಹಾನಿಯುಂಟಾಗಿದೆ. ಹೈದರಾಬಾದ್ನಲ್ಲಿರೋ ಚಾರ್ಮಿನಾರ್ನ ನಾಲ್ಕು ಸ್ತಂಭಗೋಪುರಗಳ ಪೈಕಿ ಒಂದರ ಕೆಳ ಭಾಗ ಕುಸಿದು ಬಿದ್ದಿದೆ. 428 ವರ್ಷ ಹಳೆಯದಾದ ಚಾರ್ಮಿನಾರ್ ಕಟ್ಟಡ 160 ಅಡಿ ಎತ್ತರವಿದ್ದು, 4 ಸ್ತಂಭ ಗೋಪುರ ಹೊಂದಿದೆ. ಮೆಕ್ಕಾ ಮಸೀದಿ ಬದಿಯಲ್ಲಿರುವ ಸ್ತಂಭಗೋಪುರದ ಒಂದು ಭಾಗ ಕುಸಿದಿದ್ದು, ಸ್ಮಾರಕದ ರಕ್ಷಣೆ ಬಗ್ಗೆ ಪ್ರಶ್ನೆಗಳು ಮೂಡಿವೆ. ಭಾರತೀಯ ಪುರಾತತ್ವ ಇಲಾಖೆ ಜೀರ್ಣೋದ್ಧಾರ ಕೆಲಸ ನಡೆಸುತ್ತಿದ್ದು, ಗಾರೆ, ಸುಣ್ಣದ ಕೆಲಸದ ವೇಳೆ ಮಳೆ ಸುರಿದ ಕಾರಣ ಸ್ತಂಭಗೋಪುರದ ಭಾಗ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ……