ಹೊಸದಿಲ್ಲಿ:
ಬಂಗಾರ ಕೊಳ್ಳಲು ಹೊರಟಿದ್ದೀರಾ, ಹಾಗಾದರೆ ಗಮನಿಸಿ.ಚಿನ್ನದ ಬೆಲೆ ಕಳೆದ 6 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಗುರುವಾರ ಏರಿಕೆಯಾಗಿದೆ.ದಿಲ್ಲಿಯಲ್ಲಿ ಪ್ರತಿ 10 ಗ್ರಾಂ ಸ್ವರ್ಣ ದರದಲ್ಲಿ 125 ರೂ. ಏರಿದ್ದು, 32,625 ರೂ.ಗೆ ಮುಟ್ಟಿತು. ಹಬ್ಬ ಹಾಗೂ ವೈವಾಹಿಕ ಅಗತ್ಯಗಳಿಗೆ ಆಭರಣಗಳ ಬೇಡಿಕೆ ಏರುಗತಿಯಲ್ಲಿರುವುದು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ದರ ಹೆಚ್ಚಳ ಇದಕ್ಕೆ ಕಾರಣ.
ಹೀಗಿದ್ದರೂ ಬೆಳ್ಳಿ ದರ ದುರ್ಬಲವಾಗಿದ್ದು, 130 ರೂ. ಇಳಿದು ಕೆ.ಜಿಗೆ 39,600 ರೂ.ನಷ್ಟಿತ್ತು. ಬೆಳ್ಳಿಯ 100 ನಾಣ್ಯಗಳ ಖರೀದಿ ದರ 76,000 ರೂ. ಹಾಗೂ ಮಾರಾಟ ದರ 77,000 ರೂ. ಇತ್ತು.
ಜಾಗತಿಕ ಮಟ್ಟದಲ್ಲಿ ಇತ್ತೀಚಿನ ಷೇರು ಮಾರುಕಟ್ಟೆ ಸೂಚ್ಯಂಕಗಳ ಪರಿಣಾಮ ಸ್ವರ್ಣ ದರ ಹೆಚ್ಚಿಸಿದೆ. ರೂಪಾಯಿ ಬಡವಾಗಿರುವುದು ಕೂಡ ಪ್ರಭಾವ ಬೀರಿತು. ಅಕ್ಟೋಬರ್ 23ರಿಂದ ಸತತ ಮೂರು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 405 ರೂ. ಜಿಗಿದಿದೆ……