ಗದಗ:
ರಾಜ್ಯದ ಫಾಸ್ಟ್ ಗ್ರೋವಿಂಗ್ ಝೂ ಎಂದೇ ಕರೆಯಿಸಿಕೊಳ್ಳುತ್ತಿರುವ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಇದೀಗ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಮೃಗಾಲಯಕ್ಕೆ ಆಗಮಿಸುವ ಸಂದರ್ಶಕರು ಹಾಗೂ ಪ್ರಾಣಿಗಳ ಚಲನವಲನ ಮೇಲೆ ನಿಗಾ ಇರಿಸಲು ಸಿಸಿ ಕ್ಯಾಮರಾಗಳ ಅಳವಡಿಸುವುದರೊಂದಿಗೆ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನದ ಸೇವೆ ಒದಗಿಸಲು ಮುಂದಾಗಿದೆ.
ಯೆಸ್ ವನ್ಯಜೀವಿಗಳಿಗೆ ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರ 4 ಲಕ್ಷ ರೂ. ಮೊತ್ತದಲ್ಲಿ ಆಯ್ದ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 20 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಇವು ಹಗಲಿರುಳು 40 ಮೀಟರ್ ದೂರದವರೆಗೆ ದೃಶ್ಯ ಸೆರೆ ಹಿಡಿಯಬಹುದಾಗಿದ್ದು, ಒಂದು ತಿಂಗಳ ಕಾಲ ದತ್ತಾಂಶ ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ ಎನ್ನಲಾಗಿದೆ.ಈ ಪೈಕಿ ಹುಲಿ ಪಂಜರದಲ್ಲಿ 2, ಚಿರತೆ ಬೋನಿನಲ್ಲಿ 1, ಪಕ್ಷ ಪಥದಲ್ಲಿ 2, ಇನ್ನುಳಿದ 15 ಕ್ಯಾಮರಾಗಳನ್ನು ಕರಡಿ ಬೋನ್, ಮೊಸಳೆ ಹೊಂಡ, ಮಕ್ಕಳ ಉದ್ಯಾನ ಸೇರಿದಂತೆ ವಿವಿಧೆಡೆ ಅಳವಡಿಸಲಾಗುತ್ತಿದೆ.
ಮೃಗಾಲಯದ ವನ್ಯ ಜೀವಿಗಳಿಗೆ ಕಲ್ಲು ಎಸೆಯುವುದು, ಅವುಗಳ ಗಮನ ಸೆಳೆಯಲು ಕೂಗುವುದು ನಿಷಿದ್ಧ. ಈ ನಿಟ್ಟಿನಲ್ಲಿ ಸಿಬ್ಬಂದಿ ಮೈಯಲ್ಲಾ ಕಣ್ಣಾಗಿಸಿದ್ದರೂ ಕೆಲವೊಮ್ಮೆ ಈ ರೀತಿಯ ಘಟನೆಗಳು ನಡೆದು ಹೋಗುತ್ತವೆ. ಎರಡು ತಿಂಗಳ ಹಿಂದೆ ಯಾರೋ ಜೇನುಗೂಡಿಗೆ ಕಲ್ಲು ಹೊಡೆದಿದ್ದರಿಂದ ಇಬ್ಬರಿಗೆ ಜೇನು ಕಚ್ಚಿ ಗಾಯಗೊಳಿಸಿದ್ದವು.
1976ರಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ ಕಿರು ವನ್ಯಜೀವಿ ಸಂರಕ್ಷಣಾ ಕೇಂದ್ರ ಸ್ಥಾಪಿಸಿದೆ. ಅನಂತರ ಕಿರು ಮೃಗಾಲಯವನ್ನಾಗಿ ಪರಿವರ್ತಿಸಲಾಗಿದೆ. ಇತ್ತೀಚೆಗೆ ಭಾರತ ಸರಕಾರದ ಮೃಗಾಲಯ ಪ್ರಾಧಿಕಾರದಿಂದ ಸಣ್ಣ ಮೃಗಾಲಯ ಎಂಬ ಪಟ್ಟವೂ ಒಲಿದು ಬಂದಿದೆ.
ಮೃಗಾಲಯದಲ್ಲಿ 280ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳಿವೆ. ಹುಲಿ, ಚಿರತೆ ಜಿಂಕೆ, ಕೃಷ್ಣಮೃಗ, ನೀಲಗಾಯಿ, ಕಡವೆ, ಕರಡಿ, ನರಿ, ಮೊಸಳೆ, ಆಮೆ, ಹೆಬ್ಟಾವು ಹಾಗೂ ವಿವಿಧ ಜಾತಿಯ 90 ಪಕ್ಷಿಗಳು ಪ್ರಮುಖ ಆಕರ್ಷಣೀಯ…..