ಬೆಂಗಳೂರು:
ನಾನು ಬಿಜೆಪಿಗೆ ಸೇರ್ತೀನಿ ಅನ್ನೋದು ಮುಗಿದ ಅಧ್ಯಾಯ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತ್ನಾಡಿದ ರಮೇಶ್ ಜಾರಕಿಹೊಳಿ ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರು, ಅವರು ಎಲ್ಲವನ್ನೂ ಸರಿಪಡಿಸುತ್ತಾರೆ.
ನನಗೆ ಬಳ್ಳಾರಿ ಕ್ಷೇತ್ರ ಉಸ್ತುವಾರಿ ನೀಡಿದ್ದರು, ಅಲ್ಲಿದ್ದ ಕೆಲ ಗೊಂದಲ ಸರಿಪಡಿಸಿದ್ದೇನೆ. ಜಮಖಂಡಿ ಕ್ಷೇತ್ರದ ಉಸ್ತುವಾರಿ ಕೊಡುವಂತೆ ನಾನೇ ಕೇಳಿಕೊಂಡಿದ್ದೆ. ಗಂಟಲು ನೋವು ಇದ್ದ ಕಾರಣ ಪ್ರಚಾರಕ್ಕೆ ಹೋಗಲು ಆಗಿಲ್ಲ. ಇಂದಿನಿಂದಲೇ ಜಮಖಂಡಿ ಕ್ಷೇತ್ರದಲ್ಲಿ ಪ್ರಚಾರ ಮಾಡ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು……