ಬೆಂಗಳೂರು:
ತಂದೆಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐದು ವರ್ಷದ ಬಾಲಕ ಸೋಮವಾರ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ತಲಘಟ್ಟಪುರದ ಅಂಜನಿಪುರ ನಿವಾಸಿ ಚೇತನ್ (5) ಮೃತಪಟ್ಟ ಬಾಲಕನಾಗಿದ್ದಾನೆ. ಚೇತನ್’ಗೆ ಶೇ.60 ರಷ್ಟು ಸುಟ್ಟ ಗಾಯಗಳಾಗಿತ್ತು. ಚಿಕಿತ್ಸೆ ಫಲಿಸದೇ ಸೋಮವಾರ ಬೆಳಿಗ್ಗೆ 7.30ರ ಸುಮಾರಿಗೆ ಬಾಲಕ ಮೃತಪಟ್ಟಿದ್ದಾನೆ.ಮಕ್ಕಳಿಗೆ ಪೆಟ್ರೋಲ್ ಸುರಿದು ತಾನು ಕೂಡ ಬೆಂಕಿ ಹಚ್ಚಿಕೊಂಡಿದ್ದ ಶ್ರೀನಿವಾಸ್ ಮೂರ್ತಿ ಸ್ಥಿತಿ ಕೂಡ ಗಂಭೀರವಾಗಿದೆ. ಹೀಗಾಗಿ ಆತನ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
8 ತಿಂಗಳ ಹಿಂದೆ ಪತ್ನಿಯಿಂದ ದೂರವಿದ್ದ ಶ್ರೀನಿವಾಸ್ ಮೂರ್ತಿ ಮಕ್ಕಳಾದ 3 ವರ್ಷದ ಪ್ರೀತಿಮ್ ಹಾಗೂ ಚೇತನ್ ನನ್ನು ಮನೆಗೆ ಕರೆದು ತಂದಿದ್ದ. ಪತ್ನಿಯ ಮೇಲಿನ ಕೋಪಕ್ಕೆ ನಿದ್ರೆಗೆ ಜಾರಿದ್ದ ಮಕ್ಕಳ ಮೇಲೆ ಆರೋಪಿ ತಡರಾತ್ರಿ ಪೆಟ್ರೋಲ್ ಸುರಿದು ತಾನೂ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರೀತಂ ಸ್ಥಳದಲ್ಲಿಯೇ ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ……