ನವದೆಹಲಿ:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಮತ್ತೆ Odd-Even ನಿಯಮ ಜಾರಿಗೆ ಬಂದಿದೆ. ಮನೆಯಿಂದ ಹೊರಡುವ ಮೊದಲೇ, ಆಡ್-ಈವ್ ಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ನೀವು ದಂಡ ಪಾವತಿಸಬೇಕಾಗಬಹುದು. ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿಯಮವನ್ನು ಮರು ಜಾರಿಗೆ ತರಲು ದೆಹಲಿ ಸರ್ಕಾರ ನಿರ್ಧರಿಸಿದೆ.ಈ ನಿಯಮವು ನವೆಂಬರ್ 15 ರವರೆಗೆ ಮುಂದುವರಿಯುತ್ತದೆ.
ಆಡ್-ಈವನ್ ನಿಯಮದ ಪ್ರಕಾರ, ಆಡ್ ಸಂಖ್ಯೆಯ ವಾಹನವನ್ನು ಆಡ್ (ಬೆಸ – 1,3,5,7,9) ದಿನಾಂಕದಂದು ಮತ್ತು ಈವ್ ನಂಬರ್ ವಾಹನಗಳನ್ನು (ಸಮ ಸಂಖ್ಯೆ – 2,4,6,8,0) ದಿನಾಂಕದಂದು ಚಾಲನೆ ಮಾಡಲಾಗುತ್ತದೆ.
ಬೆಸ ನಿಯಮಗಳು ಸೋಮವಾರದಿಂದ ಶನಿವಾರದವರೆಗೆ ವಾರದಲ್ಲಿ 6 ದಿನಗಳು ಜಾರಿಯಲ್ಲಿರುತ್ತವೆ. ಈ ನಿಯಮ ಭಾನುವಾರ ಅನ್ವಯವಾಗುವುದಿಲ್ಲ. ನಿಯಮಗಳನ್ನು ಉಲ್ಲಂಘಿಸುವವರು 4,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ…..