ಶಿವಮೊಗ್ಗ:
ಮಲೆನಾಡಿಗೆ ಮಂಗನ ಕಾಯಿಲೆ ಶಾಪವಾಗಿ ಪರಿಣಮಿಸಿದೆ. ಜನ ಮಂಗನಕಾಯಿಲೆ ದಾಳಿಗೆ ಬೆಚ್ಚಿ ಬಿದ್ದಿದ್ದಾರೆ. ಮಂಗನ ಕಾಯಿಲೆಗೆ ಹೆದರಿ ಕೆಲವರು ಊರು ಬಿಟ್ಟಿದ್ದಾರೆ, ಆರೇಳು ಜನ ಸಾವನ್ನಪ್ಪಿದ್ದಾರೆ ಈ ಮಂಗನ ಕಾಯಿಲೆ ಎಂಥವರಿಗೂ ಭಯವಾಗುತ್ತದೆ ಎಂದು ಊರಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲವರು ನೆಂಟರ ಮನೆ ಸೇರಿದ್ದರೆ. ಇನ್ನು ಕೆಲವರು ಒಬ್ಬರಾದ ಮೇಲೊಬ್ಬರು ಮನೆಗಳಿಗೆ ಬೀಗ ಹಾಕಿ ಊರು ಬಿಡುತ್ತಿದ್ದಾರೆ.ಶಾಲೆ ಬಾಗಿಲು ತೆರೆದಿದ್ದರೂ ಯಾವುದೇ ಮಕ್ಕಳಿಲ್ಲ. ಅಡಕೆ, ಭತ್ತದ ಕೆಲಸಕ್ಕೆ ಜನರೇ ಬರುತ್ತಿಲ್ಲ. ಮಂಗನ ಕಾಯಿಲೆಯಿಂದ ಮಲೆನಾಡಿಗೆ ಗರ ಬಡಿದಂತಾಗಿದೆ……