ನವದೆಹಲಿ:
ಮೇಲ್ವರ್ಗದಲ್ಲಿ ಹಿಂದುಳಿದಿರುವವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಒದಗಿಸುವ ಮಸೂದೆ ಮೇಲ್ವರ್ಗದ ಬಡವರಿಗೆ 10% ಮೀಸಲಾತಿಯಲ್ಲಿಂದು ಇಂದು ಮಂಡನೆಯಾಯಿತು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ಈ ಮಸೂದೆಯನ್ನು ಮಂಡಿಸಿದರು. ಸಮಾಜವಾದಿ ಪಕ್ಷದ ತೀವ್ರ ಪ್ರತಿಭಟನೆಯ ನಡುವೆಯೂ ಥಾವರ್ ಚಂದ್ ಗ್ಲೆಹೋಟ್ ಈ ಮಸೂದೆಯನ್ನು ಮಂಡಿಸಿದರು. ಮಸೂದೆ ಮೇಲೆ ಈಗ ಚರ್ಚೆ ಆರಂಭವಾಗಿದೆ.
ಇನ್ನು 2019ರ ಲೋಕಸಭಾ ಚುನಾವಣೆಗೆ ಕೇವಲ 100 ದಿನ ಬಾಕಿ ಇರುವಂತೆಯೇ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ, 10 ರಷ್ಟು ಮೀಸಲಾತಿಯನ್ನ ಪ್ರಧಾನಿ ನರೇಂದ್ರ ಮೋದಿ ಮಾಡಿರುವುದರ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ…..