Breaking News

ಯಾರಪ್ಪಂದ ಏನೈತಿ ಬೆಳಗಾವಿ ನಮ್ಮ ದೈತಿ..!

ಕನ್ನಡ ಜಾತ್ರೆಯಲ್ಲಿ ಧೂಳೆಬ್ಬಿಸಲು ಹಾಡು ರೆಡಿ....

SHARE......LIKE......COMMENT......

ಬೆಳಗಾವಿ:

ಗಡಿ ನೆಲದಲ್ಲಿ ಈ ಬಾರಿ ಕರ್ನಾಟಕ ರಾಜ್ಯೋತ್ಸವಕ್ಕಾಗಿ ಹೊಸ ಹುರುಪು ಹೆಚ್ಚುತ್ತಿದ್ದು, ಕೆಚ್ಚೆದೆಯ ಬೆಳಗಾವಿ ಹುಡುಗ್ರು ಯಾರಪ್ಪಂದ ಏನೈತಿ ಬೆಳಗಾವಿ ನಮ್ಮದೈತಿ ಎಂಬ ಹಾಡು ರಚಿಸಿ ನಿರ್ದೇಶಿಸುವ ಮೂಲಕ ಕನ್ನಡ ಜಾತ್ರೆಯಲ್ಲಿ ಧೂಳೆಬ್ಬಿಸಲು ಹೊರಟಿದ್ದಾರೆ.

ಬೆಳಗಾವಿಯ ನಾಲ್ಕೈದು ಯುವಕ-ಯುವತಿಯರು ಸೇರಿ ಈ ಹಾಡು ರಚಿಸಿ ವಿಡಿಯೋ ಮಾಡಿ ಪ್ರೊಮೊ ಬಿಡುಗಡೆ ಮಾಡಿದ್ದು, ಅ. 30ರಂದು ಪೂರ್ತಿ ಹಾಡನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ನಟ ಶಿವರಾಜಕುಮಾರ ಹಾಗೂ ಸುದೀಪ ಅಭಿನಯದ ದಿ ವಿಲನ್‌ ಚಿತ್ರದ ಟಿಕ್‌ ಟಿಕ್‌ ಟಿಕ್‌ ಹಾಡಿನ ಸಂಗೀತವನ್ನು ಬಳಸಿಕೊಂಡು ಈ ಹಾಡು ರಚಿಸಿ ಫೇಸ್‌ಬುಕ್‌ ಪೇಜ್‌ಗೆ ಅಪ್‌ಲೋಡ್‌ ಮಾಡಿದ್ದಾರೆ.

ಬೆಳಗಾವಿ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಹಾಡಿನ ಪ್ರೊಮೋ ಬಿಡಲಾಗಿದ್ದು, ಇನಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಸೇರಿ ಒಂದೇ ದಿನದಲ್ಲಿ70 ಸಾವಿರಕ್ಕೂ ಹೆಚ್ಚು ಜನರಿಗೆ ಈ ಹಾಡು ತಲುಪಿದೆ. ಅ. 30ರಂದು ಪೂರ್ತಿ ಹಾಡು ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ರಾಜ್ಯೋತ್ಸವದ ಡಾಲ್ಬಿಯಲ್ಲಿ ಈ ಹಾಡಿಗೆ ಯುವ ಪಡೆ ಹುಚ್ಚೆದ್ದು ಕುಣಿಯಲು ಸನ್ನದ್ಧವಾಗಿದೆ. ಇಂಜಿನಿಯರಿಂಗ್‌ ಓದಿರುವ ಕನ್ನಡದ ಯುವಕರು ಬೆಳಗಾವಿ ಫೇಸ್‌ಬುಕ್‌ ಪೇಜ್‌ ತಯಾರಿಸಿ ಕನ್ನಡದ ಅಭಿಮಾನ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿ ಬಗ್ಗೆ ಏನಾದರೂ ಮಾಡಬೇಕೆಂಬ ಯೋಚನೆಯೊಂದಿಗೆ 2017ರಲ್ಲಿ ಯಾರಪ್ಪಂದ ಏನೈತಿ ಆರ್‌ಸಿಬಿ ನಮ್ಮದೈತಿ ಎಂಬ ವಾಕ್ಯವನ್ನು ಬೆಳಗಾವಿ ಫೇಸ್‌ಬುಕ್‌ ಪೇಜ್‌ ಹಾಕಿದಾಗ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಂತರದಲ್ಲಿ ಯಾರಪ್ಪಂದ ಏನೈತಿ ಬೆಳಗಾವಿ ನಮ್ಮದೈತಿ ಎಂದು ಅಪ್‌ ಲೋಡ್‌ ಮಾಡುತ್ತಿದ್ದಂತೆ ರಾಜ್ಯಾದ್ಯಂತ ಜನ ಮೆಚ್ಚಿಕೊಡಿದ್ದಾರೆ. ಎಲ್ಲ ಕಡೆ ಇದು ಡಿಜೆ ಸಾಂಗ್‌ ಆಗಿಯೂ ತಯಾರಾಗಿದೆ ಎನ್ನುತ್ತಾರೆ ಕಿರಣ ಮಾಳಮ್ಮನವರ.

ಇದನ್ನೇ ನಾವು ಟೀ ಶರ್ಟ್‌ ಹಿಂದೆ ಬರೆಯಿಸಿ ಪ್ರಚಾರ ಮಾಡಿದ್ದು, ಬೆಳಗಾವಿ ರಾಜ್ಯೋತ್ಸವದಲ್ಲಿ ಹೆಚ್ಚಿನ ಯುವ ಪಡೆ ಸೇರಲಿ ಎಂಬ ಉದ್ದೇಶ ಹೊಂದಲಾಗಿತ್ತು. ಸದ್ಯ ಎರಡು ಸಾವಿರಕ್ಕೂ ಹೆಚ್ಚು ಟೀ ಶರ್ಟ್ ಗಳು ಮಾರಾಟವಾಗಿವೆ. ಬೇರೆ ಬೇರೆ ಜಿಲ್ಲೆಗಳಿಂದಲೂ ಜನ ಕೇಳುತ್ತಿದ್ದಾರೆ. ಅಮೆರಿಕಕ್ಕೂ ಈ ಟೀ ಶರ್ಟ್‌ಗಳು ಮಾರಾಟವಾಗಿವೆ. ಜೊತೆಗೆ ಇದನ್ನೇ ಹಾಡು ಮಾಡಿ ವಿಡಿಯೋ ಮಾಡಲಾಗಿದೆ ಎಂದು ಕಿರಣ ವಿವರಿಸಿದರು.

ಬೆಳಗಾವಿಯಲ್ಲಿ ಮೊದಲಿನಿಂದಲೂ ಗಡಿ ವಿವಾದ ಇದ್ದೇ ಇದೆ. ಇದಕ್ಕೆ ನಾವು ಈ ಹಾಡನ್ನು ರಚಿಸಿ ಹಾಡಿ ವೈರಲ್‌ ಮಾಡುವ ಮೂಲಕ ಟಾಂಗ್‌ ನೀಡಿದ್ದೇವೆ. ಜೊತೆಗೆ ಬೆಳಗಾಗಾವಿ ಜಿಲ್ಲೆಯನ್ನು ವಿಭಜನೆ ಮಾಡಲೂ ಕೆಲವರು ಹುನ್ನಾರ ನಡೆಸಿದ್ದಾರೆ. ಅದಕ್ಕಾಗಿಯೇ ಇಡೀ ಬೆಳಗಾವಿ ಒಂದೇ ಎಂಬರ್ಥವೂ ಇದರಲ್ಲಿದೆ…….