ನಗರದಲ್ಲಿ ನಡೆದಿರುವ ಯುಜಿಡಿ ಕಾಮಗಾರಿ ಪೂರ್ಣವಾಗಿಲ್ಲ. ಶೇ.100 ರಷ್ಟು ಕೆಲಸವಾದ ಮೇಲೆ ಸ್ಥಳ ಪರಿಶೀಲಿಸಿ ನಂತರ ಗುತ್ತಿಗೆದಾರರಿಗೆ ಬಿಲ್ ನೀಡಬೇಕೆಂದು ನಗರಸಭೆ ಸದಸ್ಯರು ಪೌರಾಯುಕ್ತೆ ಎಸ್.ಲಕ್ಷ್ಮಿ ಅವರಿಗೆ ತಾಕೀತು ಮಾಡಿದರು.
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಸೈಯದ್ ಏಜಾಜ್ ಮಾತನಾಡಿ, ಪೈಪ್ ಅಳವಡಿಕೆ ಕೆಲಸ ಶೇ.100 ರಷ್ಟಾಗಿದೆ ಎಂದು ಬೋಗಸ್ ವರದಿ ತಯಾರಿಸಲಾಗಿದೆ. ಇದಕ್ಕೆ ತಾವು ಅನುಮೋದನೆ ನೀಡಿದರೆ ಗುತ್ತಿಗೆದಾರರು ಮತ್ತೆ ನಮ್ಮ ಕೈಗೆ ಸಿಗುವುದಿಲ್ಲ. ಹೀಗಾಗಿ ಕೆಲಸ ಪೂರ್ಣವಾದ ಬಳಿಕ ಬಿಲ್ ಪಾವತಿಸಿ ಎಂದು ಸೂಚಿಸಿದರು.
ಈ ಮಾತಿಗೆ ಬೆಂಬಲ ನೀಡಿದ ಸದಸ್ಯರಾದ ಅಲ್ತಾಫ್, ಬಿ.ರೇವಣಸಿದ್ದಪ್ಪ, ಹಬೀಬ್‌ಉಲ್ಲಾ,ಎ.ವಾಮನಮೂರ್ತಿ, ಪ್ರತಿಭಾ ಪಾಟೀಲ್, ಪೈಪ್ ಅಳವಡಿಕೆ ದುರಸ್ತಿ ರಸ್ತೆಗಳನ್ನೇ ಇನ್ನೂ ಸುಸ್ಥಿತಿಗೆ ತಂದಿಲ್ಲ.ಜಲಸಿರಿಗಾಗಿ ಮತ್ತೆ ರಸ್ತೆ ಬೇಕಾಬಿಟ್ಟಿಯಾಗಿ ಅಗೆಯಲಾಗುತ್ತಿದೆ ಎಂದು ಪೌರಾಯುಕ್ತರು ಹಾಗೂ ಯುಜಿಡಿ ಇಂಜಿನಿಯರ್ ತಮ್ಮಣ್ಣೆಗೌಡರಿಗೆ ಚಾಟಿ ಬೀಸಿದರು…..