ನವದೆಹಲಿ:
ರಾಮಸೇತುವಿನ ಆರಂಭಿಕ ತಾಣವೆಂದೇ ನಂಬಲಾಗಿರುವ ತಮಿಳುನಾಡಿನ ಧನುಷ್ಕೋಡಿಯಲ್ಲಿ ಪವಿತ್ರ ಸ್ನಾನ ಮಾಡಿಯೇ ರಾಮೇಶ್ವರಕ್ಕೆ ತೆರಳಬೇಕೆಂಬ ಪ್ರತೀತಿ ಇರುವ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸಲು 17 ಕಿ.ಮೀ ಉದ್ದ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಧನುಷ್ಕೋಡಿಗೆ ರಾಮೇಶ್ವರದಿಂದ ಸಂಪರ್ಕ ಕಲ್ಪಿಸುವ ಹೊಸ ಬ್ರಾಡ್ಗೇಜ್ ರೈಲು ಮಾರ್ಗ ನಿರ್ವಿುಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ.1964ರಲ್ಲಿ ರಾಮೇಶ್ವರದಲ್ಲಿ ಸಂಭವಿಸಿದ ಭೀಕರ ಚಂಡಮಾರುತದಿಂದಾಗಿ ಧನುಷ್ಕೋಡಿ ರೈಲು ನಿಲ್ದಾಣ ನಾಶವಾಗಿತ್ತು……