Breaking News

ರೈಲು ನಿಲ್ದಾಣಗಳಿಗೆ ವಿಮಾನ ನಿಲ್ದಾಣಗಳ ಮಾದರಿಯ ಭದ್ರತೆ..!

ಪ್ರಯಾಣಿಕರ ಸುರಕ್ಷೆಯ ದೃಷ್ಟಿಯಲ್ಲಿ ಮಹತ್ತರ ನಿರ್ಧಾರ....

SHARE......LIKE......COMMENT......

ದೇಶ-ವಿದೇಶ:

ದೇಶದ ಆಯ್ದ 202 ರೈಲು ನಿಲ್ದಾಣಗಳಿಗೆ ವಿಮಾನ ನಿಲ್ದಾಣಗಳ ಮಾದರಿಯ ಭದ್ರತೆಯನ್ನು ಒದಗಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ವಿಮಾನ ನಿಲ್ದಾಣ ಮಾದರಿಯ ತಪಾಸಣೆ ಎಂದಾದರೆ ಪ್ರಯಾಣಿಕರು ರೈಲು ಹೊರಡುವ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ನಿಲ್ದಾಣಕ್ಕೆ ಬರಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ತಾಸಿಗೂ ಮೊದಲೇ ಪ್ರಯಾಣಿಕರು ಬರಲೇಬೇಕೆಂಬ ನಿಯಮವಿದೆ ಮತ್ತು ಪ್ರಯಾಣಿಕರು ಇದನ್ನು ಪಾಲಿಸುತ್ತಾರೆ ಕೂಡಾ. ರೈಲ್ವೇ 20 ನಿಮಿಷ ಮೊದಲು ಪ್ರಯಾಣಿಕರು ಬಂದರೆ ಸಾಕು ಎನ್ನುತ್ತಿದೆಯಾದರೂ ಇಷ್ಟು ಕಡಿಮೆ ಅವಧಿಯಲ್ಲಿ ನೂರಾರು ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸುವುದು ಸವಾಲಿನ ಕೆಲಸವೇ ಸರಿ.

ರೈಲು ಪ್ರಯಾಣಿಕರು ಮತ್ತು ವಿಮಾನ ಪ್ರಯಾಣಿಕರ ವರ್ತನೆಯಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ ಎಂಬ ಮೂಲ ಅಂಶವನ್ನು ಈ ಸಂದರ್ಭದಲ್ಲಿ ಇಲಾಖೆ ಅರ್ಥಮಾಡಿಕೊಳ್ಳಬೇಕು. ವಿಮಾನಕ್ಕೆ ನೂರೋ ಇನ್ನೂರೋ ಪ್ರಯಾಣಿಕರು ಸರತಿ ಸಾಲಿನಲ್ಲಿ ತಪಾಸಣೆಗಾಗಿ ಕಾಯುತ್ತಾರೆ. ಆದರೆ ರೈಲುಗಳಲ್ಲಿ ಹಾಗಲ್ಲ. ಒಂದೊಂದು ರೈಲಿನಲ್ಲೂ 800-1000 ಮಂದಿ ಪ್ರಯಾಣಿಸುತ್ತಾರೆ. ದೊಡ್ಡ ನಿಲ್ದಾಣಗಳಲ್ಲಿ ಇಂಥ ರೈಲುಗಳು ಪ್ರತಿ ನಿಮಿಷಕ್ಕೊಂದರಂತೆ ಹೋಗುತ್ತಿರುತ್ತವೆ. ಹೀಗೆ ಸಾವಿರಾರು ಪ್ರಯಾಣಿಕರಿಗೆ ಯಾವುದೇ ಅಡಚಣೆ ಮತ್ತು ಇರಿಸುಮುರಿಸಾಗದಂತೆ ತಪಾಸಣೆ ಮಾಡಲು ಸಾಧ್ಯವಾದರೆ ಇದು ಉತ್ತಮ ಕ್ರಮವಾಗುವುದರಲ್ಲಿ ಅನುಮಾನವಿಲ್ಲ.

ಪ್ರಯಾಣಿಕರ ಸುರಕ್ಷೆಯ ದೃಷ್ಟಿಯಲ್ಲಿ ಇದೊಂದು ಮಹತ್ತರವಾದ ನಿರ್ಧಾರವೆಂದು ಹೇಳಬಹುದು. ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು, ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಇದೊಂದು ಉತ್ತಮ ಉಪಕ್ರಮವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಮುಂದಡಿ ಇಟ್ಟಿರುವುದು ಸ್ವಾಗತಾರ್ಹ.