ಮಂಡ್ಯ:
ಲೋಕಸಭಾ ಅಖಾಡಕ್ಕೆ ಮಾಜಿ ಮುಖ್ಯಮಂತ್ರಿ ಬಿಜೆಪಿ, ನಾಯಕ ಎಸ್ ಎಂ ಕೃಷ್ಣ ಧುಮುಕಿದ್ದಾರೆ ಏಪ್ರಿಲ್ 4ರಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರವಾಗಿ ಪ್ರಚಾರ ಮಾಡಲಿದ್ದಾರೆ. ಕೇಂದ್ರ ಸಚಿವ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ ವಿ ಸದಾನಂದಗೌಡ ಅವರ ಪರ ಪ್ರಚಾರ ಮಾಡಿದ ಎಸ್ಎಂ ಕೃಷ್ಣ , ಪಕ್ಷದ ನಿರ್ದೇಶನದಂತೆ ತಾವು ಪ್ರಚಾರ ಮಾಡುತ್ತಿದ್ದು, ಏಪ್ರಿಲ್ 4ರಂದು ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಜನ ಬಿಜೆಪಿಗೆ ಮತ ಹಾಕುವ ಮೂಲಕ ದೇಶದ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು ಎಂದು ಮಾಜಿ ಸಿಎಂ ಮತದಾರರಿಗೆ ಮನವಿ ಮಾಡಿದರು……