ಕೋಲಾರ:
ಕೊರೋನಾ ಲಾಕ್ಡೌನ್ನಿಂದ ಕೋಲಾರದ ಟಮ್ಯಾಟೋ ರೈತ ಕಂಗಾಲಾಗಿದ್ದಾನೆ. ಉತ್ತಮ ಬೆಲೆ ಸಿಗುತ್ತೆ ಅಂತ ಸಾಲ ಮಾಡಿ ಬೆಳೆದ ಟೊಮ್ಯಾಟೋಗೆ ಬೇಡಿಕೆ ಕಡಿಮೆಯಾಗಿದೆ. ಶ್ರೀನಿವಾಸಪುರ ತಾಲೂಕಿನ ಪೆಗೆಲಪಲ್ಲಿ ಗ್ರಾಮದ ರೈತ ಟೊಮ್ಯಾಟೋವನ್ನ ಹೊಲದಲ್ಲೇ ನಾಶ ಮಾಡಿದ್ದಾನೆ. ರೈತ ಮಂಜುನಾಥ್ ಎಂಬುವವರು ಸುಮಾರು 7 ಲಕ್ಷ ರೂ ಖರ್ಚು ಮಾಡಿ 5 ಎಕರೆಯಲ್ಲಿ ಟೊಮ್ಯಾಟೋ ಬೆಳೆದಿದ್ರು. ಇದೀಗ ಸೂಕ್ತ ಮಾರುಕಟ್ಟೆ ಮತ್ತು ಸೂಕ್ತ ಬೆಲೆ ಇಲ್ಲದ ಕಾರಣ ಬೆಳೆದ ಬೆಳೆಯನ್ನೇ ನಾಶ ಮಾಡಿದ್ದಾರೆ…..