Breaking News

60 ಕೋಟಿ ಕೊಟ್ಟೆ ಆದ್ರೂ ಬೀದಿಗೆಳೆಯುತ್ತಿದ್ದಾಳೆ..!

ಡಿವೋರ್ಸ್ ನಂತರವೂ ಏಂಜಲೀನಾ ಜೋಲಿ ಹಾಗೂ ಬ್ರಾಡ್ ಪಿಟ್ ಜಗಳ....

SHARE......LIKE......COMMENT......

ಹಾಲಿವುಡ್‌:

ನಟಿ ಏಂಜಲೀನಾ ಜೋಲಿ, ಸ್ಟಾರ್‌ ನಟ ಬ್ರಾಡ್ ಪಿಟ್ ಅವರ ವಿವಾದ ದಿನೇ ದಿನೇ ಮುಂದುವರೆಯುತ್ತಿದೆ. ವಿಚ್ಛೇದನ ನಂತರವೂ ಇವರಿಬ್ಬರು ಜಗಳ ನಿಂತಿಲ್ಲ. 2014ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಎರಡು ವರ್ಷ ಸುಖಕರ ದಾಂಪತ್ಯ ನಡೆಸಿದ್ದರು. ಆದ್ರೆ, ಎರಡು ವರ್ಷದ ಅವರ ಜೀವನಕ್ಕೆ 2016 ರಂದು ವಿಚ್ಛೇದನ ಮೂಲಕ ಅಂತ್ಯವಾಡಿದರು. ಪರಸ್ಪರ ಭಿನ್ನಾಭಿಪ್ರಾಯ ಉಂಟಾದ ಕಾರಣ ಡಿವೋರ್ಸ್ ತಗೆದುಕೊಂಡರು. ಡಿವೋರ್ಸ್ ನಂತರವೂ ಇವರ ಜಗಳ ಆಗುತ್ತಲೇ ಇದೆ. ಈ ಲೇಟೆಸ್ಟ್ ಆಗಿ ಬ್ರಾಡ್ ಪಿಟ್ ಮಾಜಿ ಪತ್ನಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಕೋರ್ಟ್ ಮೊರೆ ಹೋದ ಏಂಜಲೀನಾ ವಿಚ್ಛೇದನ ನಂತರ ಮಾಜಿ ಪತಿ ಬ್ರಾಡ್ ಪಿಟ್ ತಮ್ಮ ಮಕ್ಕಳ ಪೋಷಣೆಗಾಗಿ ಅಗತ್ಯವಿರುವ ಪರಿಹಾರ ಧನ ನೀಡಿಲ್ಲ ಎಂದು ನಟಿ ಏಂಜಲೀನಾ ಜೋಲಿ ಕೋರ್ಟ್ ಮೊರೆ ಹೋಗಿದ್ದು, ಪ್ರಕರಣ ದಾಖಲು ಮಾಡಿದ್ದಾಳೆ.

ಪ್ರಚಾರಕ್ಕೆಂದ ನಟ ಏಂಜಲೀನಾ ಜೋಲಿ ಅವರ ಲಾಯರ್ ಬ್ರಾಡ್ ಪಿಟ್ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ವಿಷ್ಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಬ್ರಾಡ್ ಪಿಟ್ ”ಇದೆಲ್ಲ ಪ್ರಚಾರಕ್ಕೆಂದು ಮಾಡುತ್ತಿರುವ ಆರೋಪವಷ್ಟೇ ಎಂದು ಕಿಡಿಕಾರಿದ್ದಾರೆ.

60 ಕೋಟಿ ಕೊಟ್ಟಿದ್ದೇನೆ ಇಲ್ಲಿಯವರೆಗೂ ಆಕೆ ಮತ್ತು ಮಕ್ಕಳ ಪೋಷಣೆಗೆಂದು ಸುಮಾರು 60 ಕೋಟಿಯವರೆಗೂ ನೀಡಿದ್ದೇನೆ ಎಂದು ಬ್ರಾಡ್ ಪಿಟ್ ಹೇಳುತ್ತಿದ್ದಾರೆ. ಹೀಗಿದ್ದರೂ ನನ್ನನ್ನು ಬೀದಿಗೆ ತರುತ್ತಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಏಂಜಲೀನಾ ಜೋಲಿ ಇತ್ತೀಚಿಗೆ 54-60 ಕೋಟಿ ಬೆಲೆಯ ವಿಲ್ಲಾ ಖರೀದಿಸಿದ್ದಾರೆ. ಆ ದುಡ್ಡು ನಾನು ಕೊಟ್ಟಿದ್ದೆ. ಬೇರೆಯವರಿಂದ ಕೊಡಿಸಿದ್ದೇನೆ ಎಂದು ಬ್ರಾಡ್ ಪ್ರತ್ಯಾರೋಪ ಮಾಡುತ್ತಿದ್ದಾರೆ…