ಧಾರ್ಮಿಕ ಪರಂಪರೆ:
ಹದಿನೆಂಟು ಮೆಟ್ಟಿಲುಗಳನ್ನು ಏರಿ ಅಯ್ಯಪ್ಪನನ್ನು ಕಂಡೊಡನೆ ಭಕ್ತರ ಮನದಲ್ಲಿ, ಮೂಡುವ ಸಂತಸ ಅಷ್ಟಿಷ್ಟಲ್ಲ. ಸ್ವಾಮಿಯೇ ಶರಣಂ ಅಯ್ಯಪ್ಪಾ ಎಂದು ಕೂಗುವ ಭಕ್ತರ ಕರೆಗೆ ಅಯ್ಯಪ್ಪ ಕಿವಿಗೊಡದೇ ಇರಲಾರರು ಎಂಬಂತಹ ಸೆಲೆ ಅಲ್ಲಿ ಉದ್ಭವವಾಗಿರುತ್ತದೆ…
ದೇಶದಲ್ಲಿರುವ ಹಲವಾರು ಮಂದಿರಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಕೆಲವೊಂದು ಮಂದಿರದ ಒಳಗೆ ಪುರುಷರು ಖಾಲಿ ಮೈಯಲ್ಲಿ ಮತ್ತು ಮಹಿಳೆಯರು ಸೀರೆಯುಟ್ಟು ಪ್ರವೇಶಿಸಬೇಕು. ಆದರೆ ಶಬರಿಮಲೆಯಲ್ಲಿರುವ ಅಯ್ಯಪ್ಪನ ದರ್ಶನಕ್ಕೆ ಹೋಗಬೇಕಾದರೆ ನಾವು ಕಠಿಣ ವ್ರತವನ್ನು ಆಚರಿಸಬೇಕಾಗುತ್ತದೆ. ಅಲ್ಲಿಗೆ ಬರುವ ಭಕ್ತರು ಹೆಚ್ಚಾಗಿ ಪುರುಷರು. ಮಹಿಳೆಯರಿಗೆ ಅಲ್ಲಿ ಪ್ರವೇಶ ನಿಷಿದ್ಧವೆನ್ನಲಾಗುತ್ತದೆ.
ಆದರೆ ಹತ್ತು ವರ್ಷಕ್ಕಿಂತ ಸಣ್ಣ ಪ್ರಾಯದ ಹುಡುಗಿಯರು ಮತ್ತು 50ಕ್ಕಿಂತ ಮೇಲ್ಪಟ್ಟ ಮಹಿಳೆಯರು ಅಲ್ಲಿಗೆ ಹೋಗಬಹುದು. ಅಯ್ಯಪ್ಪನ ದರ್ಶನಕ್ಕೆ ಹೋಗಬೇಕಾದರೆ ಅಲ್ಲಿ 18 ಮೆಟ್ಟಿಲುಗಳನ್ನು ಏರಬೇಕು. ಇದಕ್ಕೆ ಮೊದಲು 41 ದಿನಗಳ ಕಾಲ ಕಠಿಣ ವ್ರತವನ್ನು ಮಾಡಬೇಕು. ಈ ವ್ರತದ ವೇಳೆ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ಅಯ್ಯಪ್ಪ ಭಜನೆ ಮಾಡಬೇಕು.
ಅಯ್ಯಪ್ಪ ಸ್ವಾಮಿ ದೇವರ ಜನ್ಮದ ಹಿಂದಿರುವ ರಹಸ್ಯವೇನು?
ಆಹಾರದಲ್ಲಿ ಬೆಳ್ಳುಳ್ಳಿ ಹಾಗೂ ಈರುಳ್ಳಿ ಸೇವನೆ ಮಾಡಬಾರದು. ಮದ್ಯಪಾನ ಹಾಗೂ ಧೂಮಪಾನ ನಿಷಿದ್ಧ. ಕಪ್ಪು ಅಥವಾ ಕೇಸರಿ ಬಟ್ಟೆ ಧರಿಸಬೇಕು. ವ್ರತದ 41ನೇ ದಿನದಂದು ಇರುಮುಡಿಯನ್ನು ತಲೆಯ ಮೇಲಿಟ್ಟು ಶಬರಿಮಲೆಗೆ ಪ್ರಯಾಣ ಬೆಳೆಸಲಾಗುತ್ತದೆ. ಹದಿನೆಂಟು ಬೆಟ್ಟಗಳ ಮಧ್ಯೆ ನೆಲೆನಿಂತ ಶಬರಿಮಲೆಯ ಮಹಾತ್ಮೆ 18 ಮೆಟ್ಟಿಲುಗಳನ್ನು ಏರಿದ ಬಳಿಕ ಅಯ್ಯಪ್ಪ ದೇವರ ದರ್ಶನವಾಗುತ್ತದೆ.
18 ಮೆಟ್ಟಿಲುಗಳ ಪ್ರಾಮುಖ್ಯತೆ :ಮೊದಲ ಐದು ಮೆಟ್ಟಿಲುಗಳು ಪಂಚೇಂದ್ರಿಯಗಳು. ನಮ್ಮ ದೇಹದಲ್ಲಿರುವ ಮೂಗು, ಕಣ್ಣು, ಕಿವಿ, ಬಾಯಿ ಮತ್ತು ಸ್ಪರ್ಶವನ್ನು ಈ ಪಂಚೇಂದ್ರಿಯಗಳೆನ್ನಾಗುತ್ತದೆ. ಪಂಚೇಂದ್ರಿಯಗಳು ಪಂಚೇಂದ್ರಿಯಗಳು ಮಾನವನ ಕಣ್ಣುಗಳು ಯಾವಾಗಲು ಒಳ್ಳೆಯದನ್ನು ನೋಡಬೇಕು ಮತ್ತು ಅಶುಭವನ್ನು ನೋಡುವುದರಿಂದ ದೂರವಿರುತ್ತದೆ ಎನ್ನಲಾಗಿದೆ. ಒಳ್ಳೆಯ ವಿಷಯಗಳನ್ನು ಕೇಳಬೇಕು ಮತ್ತು ಗಾಳಿಸುದ್ದಿಗಳಿಗೆ ಕಿವಿಕೊಡಬಾರದು. ನಾಲಗೆ ಯಾವಾಗಲೂ ಒಳ್ಳೆಯದನ್ನು ಮಾತನಾಡಬೇಕು. ಪಂಚೇಂದ್ರಿಯಗಳು ಪಂಚೇಂದ್ರಿಯಗಳು ಇದಕ್ಕಾಗಿಯೇ ಅಯ್ಯಪ್ಪನ ಧ್ಯಾನವನ್ನು ಮಾಡುತ್ತಾ ಇರಬೇಕು ಎನ್ನುವುದು ಇದರರ್ಥ. ಯಾವಾಗಲೂ ತಾಜಾ ಗಾಳಿಯನ್ನು ಉಸಿರಾಡಬೇಕು ಮತ್ತು ದೇವರಿಗೆ ಅರ್ಪಿಸುವಂತಹ ಪುಷ್ಪಗಳ ಸುಗಂಧವನ್ನು ತೆಗೆದುಕೊಳ್ಳಬೇಕು. ಸ್ಪರ್ಶಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನು ಯಾವಾಗಲೂ ಜಪಮಾಲೆಯೊಂದಿಗೆ ದೇವರ ಧ್ಯಾನ ಮಾಡುತ್ತಿರಬೇಕು
ಮುಂದಿನ 8 ಮೆಟ್ಟಿಲುಗಳು:ಅಷ್ಟರಾಗ ಮುಂದಿನ 8 ಮೆಟ್ಟಿಲುಗಳು ಅಷ್ಟರಾಗ ಅಷ್ಟರಾಗವೆಂದರೆ ಕಾಮ, ಕ್ರೋಧ, ಲೋಭ, ಮೋಹ, ಮಧ, ಮತ್ಸರ, ಅಸೂಯೆ ಮತ್ತು ಉಕ್ತಿ. ಅಷ್ಟರಾಗದ ಅರ್ಥವೆಂದರೆ…… ಅಷ್ಟರಾಗದ ಅರ್ಥವೆಂದರೆ…… ಅಷ್ಟರಾಗದ ಅರ್ಥವೆಂದರೆ ಮನುಷ್ಯನಿಗೆ ಅಂಹಕಾರವಿರಬಾರದು ಮತ್ತು ಅಸೂಯೆಯನ್ನು ಬಿಡಬೇಕು. ದೇವರ ಧ್ಯಾನ ಮಾಡುತ್ತಿರಬೇಕು ಮತ್ತು ಜೀವನದಲ್ಲಿ ಯಾವುದಕ್ಕೂ ದುರಾಸೆ ಪಡಬಾರದು. ಕೆಟ್ಟ ಜನರು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಆತ ಮಾಡಬೇಕು. ಮುಂದಿನ ಮೂರು ಮೆಟ್ಟಿಲುಗಳು ತ್ರಿಗುಣಗಳು
ಮುಂದಿನ 3ಮೆಟ್ಟಿಲುಗಳು: ತ್ರಿಗುಣಗಳು ತ್ರಿಗುಣಗಳೆಂದರೆ ಸತ್ವ, ರಾಜಸ ಮತ್ತು ಥಮಸ. ತ್ರಿಗುಣಗಳ ಅರ್ಥವೆಂದರೆ ವ್ಯಕ್ತಿಯೊಬ್ಬನು ಯಾವಾಗಲೂ ಚಟುವಟಿಕೆಯಿಂದ ಇರಬೇಕು ಮತ್ತು ಉದಾಸೀನವನ್ನು ಬಿಡಬೇಕು. ಯಾವುದೇ ಅಂಹಕಾರ ಆತನಲ್ಲಿ ಇರಬಾರದು ಮತ್ತು ಅಯ್ಯಪ್ಪ ದೇವರಿಗೆ ಆತ ಶರಣಾಗಬೇಕು. ಕೊನೆಯ ಎರಡು ಮೆಟ್ಟಿಲುಗಳು ವಿದ್ಯೆ ಮತ್ತು ಅವಿದ್ಯೆ ಕೊನೆಯ ಎರಡು ಮೆಟ್ಟಿಲುಗಳು ವಿದ್ಯೆ ಮತ್ತು ಅವಿದ್ಯೆ ಕೊನೆಯ ಎರಡು ಮೆಟ್ಟಿಲುಗಳು ವಿದ್ಯ ಮತ್ತು ಅವಿದ್ಯೆ. ವಿದ್ಯೆಯೆಂದರೆ ಜ್ಞಾನ. ಅಂಹನ್ನು ತ್ಯಜಿಸಿ ನಾವು ವಿದ್ಯೆಯನ್ನು ಪಡೆಯಬೇಕಾಗಿದೆ ಮತ್ತು ಮೋಕ್ಷದೆಡೆಗೆ ಸಾಗಬೇಕು.
ಶಬರಿಮಲೆಯಲ್ಲಿ 18 ಮೆಟ್ಟಿಲುಗಳನ್ನು ಹತ್ತಿದ ಬಳಿಕ ಭಕ್ತರಿಗೆ ಜೀವನದ ಬಗ್ಗೆ ಮನವರಿಕೆಯಾಗುತ್ತದೆ. ಜೀವನದ ಜ್ಞಾನ ಅವರಿಗೆ ಸಿಗುತ್ತದೆ.ಜೀವನದ ಗುರಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ. ತೆಂಗಿನ ಕಾಯಿ ಒಡೆಯುವುದು ತೆಂಗಿನ ಕಾಯಿ ಒಡೆಯುವುದು ಮೊದಲೇ ಹೇಳಿದಂತೆ ಇರುಮುಡಿಯನ್ನು ತಲೆಯಲ್ಲಿ ಇಟ್ಟುಕೊಂಡು 18 ಮೆಟ್ಟಿಲುಗಳನ್ನು ಏರಬೇಕು. ಇರುಮುಡಿಯಲ್ಲಿರುವ ಸಾಮಗ್ರಿಗಳನ್ನು ದೇವಸ್ಥಾನಕ್ಕೆ ನೀಡಲಾಗುತ್ತದೆ. ಇಲ್ಲಿ ನೀಡಲಾಗುವ ಪ್ರಸಾದವನ್ನು ಮನೆಗೆ ಕೊಂಡೊಯ್ಯಲಾಗುತ್ತದೆ……