ಶ್ರೀಲಂಕಾ:
ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ದಿನದಂದೇ 3 ಚರ್ಚ್ಗಳು , 3 ಹೋಟೆಲ್ಗಳು ಹಾಗೂ ಸಾರ್ವಜನಿಕ ಸ್ಥಳಗಳೂ ಸೇರಿ ಒಟ್ಟು 8 ಕಡೆಗಳಲ್ಲಿ ಭಯೋತ್ಪಾದಕರು ಬಾಂಬ್ ಬ್ಲಾಸ್ಟ್ ನಡೆಸಿದ್ದಾರೆ. ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಐವರು ಭಾರತೀಯರು, 27 ಮಂದಿ ವಿದೇಶೀಯರು ಸೇರಿದಂತೆ ಈವರೆಗೆ 217 ಮಂದಿ ಮೃತಪಟ್ಟಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಭಾರತ, ಬ್ರಿಟಿಷ್, ಡಚ್ ಮತ್ತು ಅಮೆರಿಕನ್ ಪ್ರಜೆಗಳೂ ಸೇರಿದ್ದಾರೆ. ಇನ್ನು ಬಾಂಬ್ ಬ್ಲಾಸ್ಟ್ನಲ್ಲಿ ಕರ್ನಾಟಕದ ಇಬ್ಬರು ಮಹಿಳೆಯರು ಸಹ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 13 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.ಘಟನೆ ಹಿಂದೆ ತಾವೀದ್ ಜಮಾತ್ ಉಗ್ರ ಸಂಘಟನೆಯ ಕೈವಾಡವಿರೋ ಶಂಕೆ ವ್ಯಕ್ತವಾಗಿದೆ….