Breaking News

ಸಂಸದರಿಗೆ ಗ್ರಾಮಸ್ಥರ ತರಾಟೆ..!

ಮೂಲಸೌಲಭ್ಯ ನೀಡದೆ ಮತ ಕೇಳ್ತೀರಾ ಎಂದು ಆಕ್ರೋಶ....

SHARE......LIKE......COMMENT......
ಹಾರೋಹಳ್ಳಿ:

ಕೀರಣಗೆರೆ ಮತ್ತು ಟಿ.ಹೊಸಹಳ್ಳಿಗೆ ಸೋಮವಾರ ಪ್ರಚಾರಕ್ಕೆ ತೆರಳಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮತ್ತು ಸಂಸದ ಡಿ.ಕೆ.ಸುರೇಶ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.ಗ್ರಾಮಗಳಿಗೆ ಮೂಲಸೌಲಭ್ಯ ನೀಡದೆ ಚುನಾವಣೆ ಸಂದರ್ಭದಲ್ಲಿ ಮತ ಬೇಡಲು ಬರುತ್ತೀರಿ. ರೇಷ್ಮೆ ಗೂಡು ಬೆಲೆ ಪಾತಾಳಕ್ಕೆ ಇಳಿದಿದ್ದು, ಟಿ.ಹೊಸಹಳ್ಳಿ ರೈತರಿಗೆ ಆತ್ಮಹತ್ಯೆ ಮಾರ್ಗ ಒಂದೇ ಉಳಿದಿದೆ ಎಂದು ಆಕ್ರೋಶ ಹೊರಹಾಕಿದರು.

ಜಕ್ಕಸಂದ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬೇರೆ ಬೇರೆಯಾಗಿ ನಿಂತಿದ್ದರು. ಇದನ್ನು ಕಂಡ ಸಂಸದರು ಪ್ರತಿಷ್ಠೆ ಬಿಟ್ಟು ಒಂದುಗೂಡಿ ಎಂದು ಮನವಿ ಮಾಡಿದ ನಂತರ ಅನಿತಾ ಕುಮಾರಸ್ವಾಮಿ ಮಾತನಾಡಲು ಆರಂಭಿಸುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತರು.ಮೈತ್ರಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ವೇಳೆ ಜಕ್ಕಸಂದ್ರದ ಬಳಿ ಟ್ರಾಫಿಕ್ ಉಂಟಾಗಿದ್ದರಿಂದ ಚುನಾವಣಾಧಿಕಾರಿಗಳು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಘೊಷಣೆ ಕೂಗಿದರು……