ಬೆಳಗಾವಿ:
ಬಳ್ಳಾರಿಯಲ್ಲಿ ಐಟಿ ರೇಡ್ ಮುಗಿಯುತ್ತಿದ್ದಂತೆ ಇದೀಗ ಬೆಳಗಾವಿಯಲ್ಲಿ ಐಟಿ ಬೇಟೆ ಶುರುವಾಗಿದೆ. ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಹಾಗೂ ಬೆಳಗಾವಿ ತಾಲೂಕು ಪಂಚಾಯತ್ ಸದಸ್ಯ ಶಂಕರಗೌಡ ಪಾಟೀಲ್ ಮನೆ ಮೇಲೆ ಐಟಿ ರೇಡ್ ಮಾಡಿದ್ದಾರೆ. ಬೆಳಗಾವಿ ಮನೆ, ವೀರಕಣಕೊಪ್ಪ ಗ್ರಾಮದಲ್ಲಿರುವ ಫಾರ್ಮ್ ಹೌಸ್ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ರು. ಗೋವಾ, ಬೆಳಗಾವಿ ಐಟಿ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ದಾಳಿ ವೇಳೆ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.