Breaking News

ಸೋಷಿಯಲ್ ಮೀಡಿಯಾ ಆರೋಗ್ಯಕ್ಕೆ ಕಂಟಕನಾ..?

ವಿಶ್ವ ಆರೋಗ್ಯ ಸಂಘಟನೆಯ ಸ್ಪೋಟಕ ವರದಿ....

SHARE......LIKE......COMMENT......
ವಿಶ್ವ ಆರೋಗ್ಯ ಸಂಘಟನೆ ವರದಿ ಪ್ರಕಾರ ವಿಶ್ವದಲ್ಲಿ ಸುಮಾರು 300 ಮಿಲಿಯನ್ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ.ಇದಕ್ಕೆ ಬಹುಮುಖ್ಯ ಕಾರಣ ಸೋಷಿಯಲ್ ಮೀಡಿಯಾ ಎನ್ನುತ್ತದೆ ವಿಶ್ವ ಆರೋಗ್ಯ ಸಂಘಟನೆ ವರದಿ.
ಇಂದು ಬಹುತೇಕ ಮಂದಿ ಫೇಸ್ ಬುಕ್, ಟ್ವಿಟ್ಟರ್ ನಂತರ ಸಾಮಾಜಿಕ ಮಾಧ್ಯಮಗಳನ್ನು ತಮ್ಮ ಆಲೋಚನೆ, ಅಭಿಪ್ರಾಯಗಳನ್ನು, ಖುಷಿ, ನೋವುಗಳನ್ನು ಹಂಚಿಕೊಳ್ಳಲು ಬಳಸುತ್ತಿದ್ದಾರೆ. ವ್ಯಕ್ತಿಯ ಚಿಂತನೆ, ಮನಸ್ಥಿತಿ, ಸಂವಹನ, ಚಟುವಟಿಕೆಗಳು, ಮತ್ತು ಸಾಮಾಜಿಕತೆಗೆ ಸಂಬಂಧಪಟ್ಟ ವರ್ತನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಭಾಷೆ ಮತ್ತು ಭಾವನೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಇದರಿಂದ ಅಪರಾಧಿ ಪ್ರಜ್ಞೆ, ಅಸಹಾಯಕತೆ, ಆತ್ಮ ದ್ವೇಷ, ತಾವು ಏನಕ್ಕೂ ಉಪಯೋಗವಿಲ್ಲ ಎಂಬಿತ್ಯಾದಿ ಭಾವನೆಗಳು ಉಂಟಾಗಿ ಅದು ಖಿನ್ನತೆಯನ್ನುಂಟುಮಾಡುತ್ತದೆ.
ದಿನಂಪ್ರತಿ ಸೋಷಿಯಲ್ ಮೀಡಿಯಾವನ್ನು ಬಳಸುವವರಲ್ಲಿ ಇಂತಹ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತದೆ.ನೀವು ಮನೆಯಲ್ಲಿ ಒಬ್ಬರೇ ಕುಳಿತು ಏಕತಾನತೆಯನ್ನು ಅನುಭವಿಸುತ್ತಿರುವಾಗ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ನಿಮ್ಮ ಸ್ನೇಹಿತರು ಹೊರಗಡೆ ಎಂಜಾಯ್ ಮಾಡುತ್ತಿರುವುದು ನೋಡಿದರೆ ನಿಮ್ಮಲ್ಲಿ ಋಣಾತ್ಮಕ ಭಾವ ಮೂಡಬಹುದು. ಇದು ನಿಧಾನವಾಗಿ ಖಿನ್ನತೆಗೆ ದಾರಿ ಮಾಡಿ ಕೊಡುತ್ತದೆ. ಅಧ್ಯಯನ ಪ್ರಕಾರ ಸೋಷಿಯಲ್ ಮೀಡಿಯಾ ಮತ್ತು ಖಿನ್ನತೆ ಮಧ್ಯೆ ಬಹಳ ಹತ್ತಿರದ ಸಂಬಂಧವಿದೆ ಎಂದು ಹೇಳುತ್ತದೆ.
ಇನ್ನು ಈಗಾಗಲೇ ಖಿನ್ನತೆಯಿಂದ ಬಳಲುತ್ತಿರುವವರು ವ್ಯಕ್ತಿಗಳ ಜೊತೆ ಸಂವಹನ ನಡೆಸುವ ಬದಲು ಸಾಮಾಜಿಕ ಮಾಧ್ಯಮಗಳಲ್ಲಿಯೇ ದಿನದ ಬಹುತೇಕ ಸಮಯ ಮುಳುಗಿರುತ್ತಾರೆ.ಇನ್ನು ಕೆಲವರು ಖಿನ್ನತೆ ಮತ್ತು ಸಾಮಾಜಿಕ ಕಾತರತೆಯಿಂದ ಬಳಲುತ್ತಿರುವವರಿಗೆ ಸೋಷಿಯಲ್ ಮೀಡಿಯಾ ಸಹಾಯ ಮಾಡುವ ಉದಾಹರಣೆಗಳು ಕೂಡ ಇವೆ, ಅದು ವ್ಯಕ್ತಿ ಸೋಷಿಯಲ್ ಮೀಡಿಯಾವನ್ನು ಹೇಗೆ ಬಳಸುತ್ತಾನೆ ಎಂಬುದನ್ನು ಆಧರಿಸಿಕೊಂಡು ಇರುತ್ತದೆ.
ಸೋಷಿಯಲ್ ಮೀಡಿಯಾಗಳಲ್ಲಿ ಸಂತಸದ ಕ್ಷಣಗಳನ್ನು ಮತ್ತು ವಿಚಾರಗಳನ್ನು ಹಂಚಿಕೊಂಡವರ ಜೀವನವೆಲ್ಲವೂ ಖುಷಿಯಾಗಿರುತ್ತದೆ ಎಂದು ಅರ್ಥವಲ್ಲ ಎನ್ನುತ್ತಾರೆ ಮನಃಶಾಸ್ತ್ರಜ್ಞರು.ಹೀಗಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸುವವರು ದ್ವೇಷ, ಅಸೂಯೆ, ಅಸಮರ್ಪಕತೆ, ಖಿನ್ನತೆ ಮತ್ತು ಸಾಮಾಜಿಕ ಹೋಲಿಕೆಗಳನ್ನು ಸಮಾನವಾಗಿ ಬಳಸುವುದನ್ನು ಕಲಿಯಬೇಕು……