ತುಮಕೂರು:
ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಬಿಜಿಎಸ್ ವೈದ್ಯರಾದ ಡಾ. ರವೀಂದ್ರ ಹಾಗೂ ಡಾ. ವೆಂಕಟರಮಣ ತಿಳಿಸಿದ್ದಾರೆ.
ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದರಿಂದ ಸಮಸ್ಯೆಯಾಗಿತ್ತು. ಇದೀಗ ನೀರನ್ನು ಹೊರ ತೆಗೆಯಲಾಗುತ್ತಿದೆ. ಶ್ರೀಗಳ ನಾಡಿ ಮಿಡಿತವೂ ಉತ್ತಮ ಸ್ಥಿತಿಗೆ ತಲುಪಿದೆ. ಶ್ವಾಸಕೋಶದಲ್ಲಿ ಶೇಖರಣೆಯಾಗಿದ್ದ ನೀರಿನಿಂದಾಗಿ ಸೋಂಕು ಉಂಟಾಗಿತ್ತು ಎಂದು ಅವರು ಹೇಳಿದ್ದಾರೆ…..