Breaking News

ಸಿಲಿಕಾನ್ ಸಿಟಿ ಶ್ರೀಮಂತರಿಗೆ ಬಿಬಿಎಂಪಿಯಿಂದ ಶಾಕಿಂಗ್ ನ್ಯೂಸ್..?!

ಶೇ.2 ರಷ್ಟು ತೆರಿಗೆ ಹೆಚ್ಚಳ....

SHARE......LIKE......COMMENT......

ಬೆಂಗಳೂರು: 

ಸಿಲಿಕಾನ್ ಸಿಟಿ ಆಸ್ತಿ ಮಾಲೀಕರಿಗೆ ಬಿಬಿಎಂಪಿ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಶೇ.2 ರಷ್ಟು ತೆರಿಗೆ ಹೆಚ್ಚಳ ಮಾಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಸಾರಿಗೆ ಇಲಾಖೆ ನಷ್ಟ ತುಂಬಿಸಲು, ಆಸ್ತಿ ತೆರಿಗೆ ಮೂಲಕ ಹಣ ಸಂಗ್ರಹಿಸಲು ಬಿಬಿಎಂಪಿ ತೀರ್ಮಾನಿಸಿದೆ. 2008-09 ರಿಂದ ತೆರಿಗೆ ಹೆಚ್ಚಳ ಮಾಡದಿರೋ ಪಾಲಿಕೆ, ಇದೀಗ ಸರ್ಕಾರದ ಆದೇಶದಂತೆ ಉಪಕರ ಸಂಗ್ರಹಕ್ಕೆ ಮುಂದಾಗಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಡಳಿತದಲ್ಲಿ ತೆರಿಗೆ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸ್ವತಃ ಬಿಜೆಪಿ ತೆರಿಗೆ ಹೆಚ್ಚಳದ ಮಾಡಿದ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿತ್ತು. ಆದ್ರೆ ಇದೀಗ ಬಿಜೆಪಿ ಆಡಳಿತಾವಧಿ ಜೊತೆಗೆ ಪಾಲಿಕೆಯಲ್ಲೂ ಅಧಿಕಾರಕ್ಕೆ ಬರ್ತಿದ್ದಂತೆ ಬೆಂಗಳೂರಿಗರಿಗೆ ತೆರಿಗೆ ಶಾಕ್ ನೀಡಲು ಬಿಜೆಪಿ ಸಜ್ಜಾಗಿದೆ. ಕೌನ್ಸಿಲ್ ಸಭೆಯಲ್ಲಿ ತೆರಿಗೆ ಹೆಚ್ಚಳ ಬಗ್ಗೆ ನಿರ್ಧಾರ ಮಾಡಲಾಗಿದ್ದು, ಅಂದುಕೊಂಡಂತಾದ್ರೆ ಮುಂದಿನ ಆರ್ಥಿಕ ವರ್ಷದಿಂದಲೇ ಜಾರಿ ಮಾಡುವ ಸಾಧ್ಯತೆ ಇದೆ……